Tuesday, September 22, 2015

ಶಿವಣ್ಣನ ಕಿರಿ ಮಗಳ ಮದುವೆ ಯಾವಾಗಂತೆ..!?

- ಅಶ್ವತ್ಥ ಕೋಡಗದ್ದೆ

ಹ್ಯಾಟ್ರಿಕ್ ಹೀರೋ ಶಿವಣ್ಣನ ಕಿರಿ ಮಗಳ ಮದುವೆ ಯಾವಾಗಂತೆ..? ಮುಂದಿನ ವರ್ಷವೇ ಆಗುತ್ತಾ..? ಬೇಗನೇ ಮದುವೆ ಮಾಡಿದ್ರೆ ಚೆನ್ನಾಗಿತ್ತೇನೋ..? ಮೊದಲ ಮಗಳ ಮದುವೆ ಮಾಡಿದ್ದಕ್ಕೆ ಥ್ಯಾಂಕ್ಸ್ ಹೇಳಬೇಕಪ್ಪ..!

ಇದೇನ್ರಿ ಇದು.. ಶಿವಣ್ಣಗೇ ಇಲ್ಲದಿರೋ ತಲೆಬಿಸಿ ಇವರ್ಯಾರಿಗೆ ಅಲ್ವಾ.. ಹೌದ್ರಿ ಕಳೆದ 15 ದಿನದಿಂದ ಟಿವಿ ಚಾನೆಲ್ ನ ಮನೆಗಳೊಳಗೆ ಇದೇ ಮಾತು ನೋಡಿ.. ಕಾರಣ ಇಷ್ಟೇ…. ಮೊದಲ ಮಗಳ ಮದುವೆಯಲ್ಲಾದ ಲಾಭ 2ನೇ ಮಗಳ ಮದುವೆಯಲ್ಲೂ ಸಿಗ್ಲಿ ಅನ್ನೋ ಸಿಂಪಲ್ ಲೆಕ್ಕಾಚಾರ..
ಹೌದು ಶಿವರಾಜ್ ಕುಮಾರ್ ಮೊದಲ ಮಗಳು ಅನುಪಮಾ ಮದುವೆಯನ್ನು ಜಿದ್ದಿಗೆ ಬಿದ್ದಂತೆ  ನಮ್ಮ ಚಾನಲ್ ಗಳು ಲೈವ್ ಕೊಟ್ವಲ್ಲ. ಜೊತೆಗೆ ಎಂ ಎಂ ಕಲ್ಬುರ್ಗಿ ಕೊಲೆಯಾದ ಸುದ್ದಿ ಕೊಡೋದರ ಬದಲು ಮದುವೆ ಪ್ರಸಾರ ಮಾಡಿದ್ವು ಅನ್ನೋ ಆರೋಪವನ್ನೂ ಹೊತ್ತುಕೊಂಡ್ವಲ್ಲ. ಫೇಸ್ಬುಕ್ ನಲ್ಲಂತೂ ಚಾನೆಲ್ ಗಳಿಗೆ ಬಾಯಿಗೆ ಬಂದಂತೆ ಮಂಗಳಾರತಿಗಳೂ ಆದ್ವಲ್ಲ. ಮದುವೆ ನೇರಪ್ರಸಾರಕ್ಕೆ ಸಂಪರ್ಕಿಸಿ ಅಂತಾ ಎಲ್ಲಾ ಚಾನೆಲ್ ಗಳ ಹೆಸರನ್ನು ಹಾಕಿದ ಜೋಕ್ಸ್ ವಾಟ್ಸ್ ಆ್ಯಪ್ ನಲ್ಲಿ ಹರಿದಾಡಿದ್ವಲ್ಲ. ಇದನ್ನೆಲ್ಲಾ ನೋಡ್ತಿದ್ದ  ಚಾನೆಲ್ ಗಳಿಗೆ ಸ್ವಲ್ಪ ನಡುಕ ಉಂಟಾದ್ದಂತೂ ಸುಳ್ಳಲ್ಲ. ಆದರೆ ನೆಕ್ಸ್ಟ್ ವೀಕ್ TRP ಬಂತು ನೋಡಿ. ಆಗ ಎಲ್ಲಾ ಉಲ್ಟಾಪಲ್ಟಾ.

ಯಾರ್ಯಾರು ಶಿವಣ್ಣನ ಮಗಳ ಮದುವೆ ಲೈವ್ ಕೊಟ್ಟಿದ್ವೋ ಅವರೆಲ್ಲರ TRP ಏರಿಕೊಂಡು ಕುಳಿತುಬಿಟ್ಟಿತ್ತು. (ಈ ಟಿಆರ್ ಪಿ ಅನ್ನೋದೇ ಅವೈಜ್ಞಾನಿಕ ಅನ್ನೋದನ್ನು ಹೊರತಾಗಿಯೂ) ಎಂ ಎಂ ಕಲ್ಬುರ್ಗಿ ಸತ್ತ ಸುದ್ದಿ ತೋರಿಸಿದಾಗ ಸ್ವಲ್ಪ ಕೆಳಕ್ಕಿದ್ದ TRP, ಮದುವೆ ಲೈವ್ ಬಂದಾಗೆಲ್ಲ ರೋಹಿಣಿ ನಕ್ಷತ್ರ ನೋಡಿತ್ತು ಹತ್ತಿರ ಹತ್ತಿರ ಎಲ್ಲಾ ಚಾನೆಲ್ ಗಳು 15 ರಿಂದ 20 ಪರ್ಸೆಂಟ್ ಗ್ರೋಥ್ ದಾಖಲಿಸಿ ಹಿರಿ ಹಿರಿ ಹಿಗ್ಗಿದ್ವು.
ಆಗಲೇ ಎಲ್ಲರ ಬಾಯಲ್ಲೂ ಬಂದಿದ್ದು ಎರಡನೇ ಮಗಳ ಸುದ್ದಿ. ಶಿವಣ್ಣನ ಮೊದಲ ಮಗಳ ಮದುವೆಯಲ್ಲಿ TRP ಲೆಕ್ಕದಲ್ಲಿ ಇಷ್ಟು ಲಾಭ ಮಾಡಿಕೊಂಡ್ವಿ ಮತ್ತೊಂದು ಮಗಳ ಮದುವೆಯನ್ನೂ ಆದಷ್ಟು ಬೇಗ ಮಾಡಬಹುದಿತ್ತಲ್ವೆ. ಆಗ ಒಂದೆರಡು ವಾರ ಬೇರೆ ಸುದ್ದಿ ಹುಡುಕೋ ಕೆಲಸ ಇರಲ್ಲ, ಅನಾಮತ್ತು TRPನೂ ಬರುತ್ತೆ ಅನ್ನೋ ಪಾಲಿಸಿ.


ಈ TRP ಲೆಕ್ಕಾಚಾರ, ಚಾನೆಲ್ ಗಳ ಗುಣಾಕಾರ ಭಾಗಾಕಾರ ಶಿವಣ್ಣಗೆ ಗೊತ್ತಾಗಿಲ್ಲ ಅನ್ಸುತ್ತೆ. ಗೊತ್ತಾದ್ರೆ ಖಂಡಿತ ಕಿರಿ ಮಗಳ ಮದುವೆ ಕವರೇಜ್ ರೈಟ್ಸನ್ನ ಯಾರಿಗಾದ್ರೂ ಕೊಟ್ಟು ಸ್ವಲ್ಪ ದುಡ್ಡಾದ್ರೂ ಮಾಡ್ಕೋತಾರೆ. ತೆಲುಗು ಸ್ಟಾರ್ ಗಳಲ್ಲಿ ಎಷ್ಟೋ ಜನರ ಮದುವೆ ರೈಟ್ಸ್ ನ್ನು ಕೊಟ್ಟಿದ್ದನ್ನು ನೋಡಿಲ್ವಾ ನಾವು.  ಅಲ್ಲ ಅದರಲ್ಲಿ ತಪ್ಪೇನಿದೆ ಹೇಳಿ. ಅಷ್ಟೊಂದು ದುಡ್ಡು ಖರ್ಚು ಮಾಡಿ ಮದುವೆ ಮಾಡೋವಾಗ ಈ ರೈಟ್ಸ್ ನಿಂದಾನಾದ್ರೂ ಸ್ವಲ್ಪ ದುಡ್ಡು ಬರಲಿ. ಇಲ್ಲಾ ಅಂದ್ರೆ ಯಾರೋ ಪುಕ್ಕಟೆ ಲಾಭ ಮಾಡಿಕೊಂಡು ಹೋಗ್ತಾರಲ್ವಾ. ಯಾರಾದರೂ ಶಿವಣ್ಣಗೆ ಈಗ್ಲೆ ಐಡಿಯಾ ಕೊಡಬಹುದಿತ್ತೆನೋ..!

Thursday, October 18, 2012

ಮಾಧ್ಯಮಗಳಿಗೆ ಬೈಯ್ಯುವವರು ಒಮ್ಮೆ ಇತ್ತ ನೋಡಿ…!


-    -  ಅಶ್ವತ್ಥ ಕೋಡಗದ್ದೆ
ಇಂದಿನ ಮಾಧ್ಯಮಗಳನ್ನು ವಿಮರ್ಷೆ ಮಾಡುವ, ತಪ್ಪುಗಳನ್ನು ಎತ್ತಿ ತೋರಿಸುವ ಒಂದು ವರ್ಗ ಇಂದಿನ ಸಮಾಜದಲ್ಲಿದೆ.  ಅದರಲ್ಲಂತೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಆಗುಹೋಗುಗಳನ್ನು ಬಹಳ ಗಂಭೀರವಾಗಿ ವಿಮರ್ಶೆ ಮಾಡುವ ಗುಂಪು ಇದು. ಇದು ಹಾಗಲ್ಲ, ಹೀಗಾಗಬೇಕಿತ್ತು ಎಂದು ಸರಿ ಮಾಡಿ ನಡೆಯಲು ಸ್ವಲ್ಪ ಮಾಡಿಕೊಡುವ ಗುಂಪು ಇದು. ಇರಲಿ, ಇವರ ಬಗ್ಗೆ ಗೌರವವಿದೆ. ಎಲೆಕ್ಟ್ರಾನಿಕ್ ಮಾಧ್ಯಮದ ಬೆಳವಣಿಗೆಗೆ ಇದು ಸಹಕಾರಿ ಆಗಬಹುದೇನೋ.


ಆದರೆ ಎಲೆಕ್ಟ್ರಾನಿಕ್ ಮಾಧ್ಯಮದ ಮೇಲೆ ದ್ವೇಷ ಕಾರೂ ಕೆಲ `ವ್ಯಕ್ತಿ’ಗಳೂ ಇಂದು ಹುಟ್ಟಿಕೊಳ್ಳುತ್ತಿದ್ದಾರೆ. ನೀವು ಮಾಡ್ತಿರೋದೆಲ್ಲಾ ತಪ್ಪು. ಇವರಿಗೆ ಮಾಡೋದಕ್ಕೆ ಬೇರೆ ಕೆಲಸ ಇಲ್ಲ  ಅನ್ನೋದು ದಾಟಿಯಲ್ಲಿ ಮಾತನಾಡೋದು ಇವರ ಜಾಯಮಾನ. ಓಕೆ ನಾವು ಮಾಡೋದು ತಪ್ಪು. ಒಪ್ಪಿಕೊಳ್ಳೋಣ. ಸರಿಯಾದ ಮಾರ್ಗ ಯಾವುದಯ್ಯಾ ಅಂತಾ ಕೇಳಿದ್ರೆ ಇವರ ಬಳಿ ಉತ್ತರ ಇಲ್ಲ.

ನಾನೇನು ಎಲೆಕ್ಟ್ರಾನಿಕ್ ಮಾಧ್ಯಮದ ವಕ್ತಾರನಂತೆ ಇಲ್ಲಿ ಮಾತನಾಡುತ್ತಿಲ್ಲ. ಆದರೆ ಇಲ್ಲಿ ಕೆಲಸ ಮಾಡಿದ5-6 ವರ್ಷದ ಅನುಭವದಲ್ಲಿ, ಅದಕ್ಕಿಂತ ಹೆಚ್ಚಾಗಿ ಒಬ್ಬ ವೀಕ್ಷಕನಾಗಿ ಈ ಕೆಲ ಮಾತನ್ನ ಹೇಳ್ತಿದ್ದೇನೆ. ಈ ಎಲೆಕ್ಟ್ರಾನಿಕ್ ಮಾಧ್ಯಮಗಳೇ ಸರಿ ಇಲ್ಲ ಅನ್ನೋ ಮಂದಿಗೆ ಒಂದು ಪ್ರಶ್ನೆ ಕೇಳ್ತೇನೆ… ಈ ನ್ಯೂಸ್ ಚಾನೆಲ್ ಗಳು ಇಲ್ಲದಿದ್ರೆ ರಾಜಕಾರಣಿಗಳ ಕಪಟತನ, ಭ್ರಷ್ಟಾಚಾರ ಬಯಲಾಗ್ತಿತ್ತಾ..? ಡೋಂಗಿ ಬಾಬಾಗಳ ಬಂಡವಾಳ ಬಯಲಾಗ್ತಿತ್ತಾ..? ಅತ್ಯಾಚಾರ, ಅನಾಚಾರದಿಂದ ನಲುಗಿದ ಹೆಣ್ಣಿಗೆ ನ್ಯಾಯ ಸಿಗ್ತಿತ್ತಾ..? ನಾವೆಲ್ಲರೂ ಹಗಲೂ ರಾತ್ರಿ ಕುಳಿತು ನೋಡುವ ಕ್ರಿಕೆಟ್ ನಲ್ಲಿ ಫಿಕ್ಸಿಂಗ್ ಇದೆ ಅನ್ನೋದು ಗೊತ್ತಾಗ್ತಿತ್ತಾ…?
ನೋಡಿ ಬೇಕಿದ್ರೆ, 1986 ರಲ್ಲಿ ಪತ್ರಕರ್ತೆ ಚಿತ್ರಾ ಸುಬ್ರಹ್ಮಣಿಯನ್ ಬೋಪೋರ್ಸ್ ಹಗರಣ ಹೊರಗೆ ಹಾಕಿದ್ಲು. ಆಗಿನ ಕಾಲದಲ್ಲಿ 64 ಕೋಟಿ ರೂಪಾಯಿ ಹಗರಣ ಅದು.  ಎಷ್ಟೊಂದು ಸದ್ದು ಮಾಡ್ತು ಅದು. ಇಂದಿಗೂ ಹಗರಣಗಳ ಪಟ್ಟಿ ಬಂದಾಗ ಮೊದಲು ನೆನಪಾಗೋದೇ ಅದು. ಬಳಿಕ ಎಷ್ಟೋ ಹಗರಣಗಳಾದ್ವು. ಎರಡು ವರ್ಷದ ಹಿಂದೆ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದು 2ಜಿ ಸ್ಪೆಕ್ಟ್ರಂ ಹಗರಣ. ಕೇಂದ್ರ ಸರ್ಕಾರ 1.76 ಲಕ್ಷ ಕೋಟಿ ರೂಪಾಯಿ ನುಂಗಿ ನೀರು ಕುಡಿದಿತ್ತು. ಇದನ್ನು ಹೈಪ್ ಮಾಡಿದ್ದು ನ್ಯೂಸ್ ಚಾನೆಲ್. ಆಗ ದಿನಗಟ್ಟಲೇ ನ್ಯೂಸ್ ಚಾನೆಲ್ ಗಳು ಈ ಬಗ್ಗೆ ಮಾಹಿತಿ  ಕೊಡ್ತಾ ಇರದಿದ್ರೆ ರಾಜಾ, ಕನ್ನಿಮೋಳಿಯಂತವರು ಜೈಲಿಗೆ ಹೋಗೋದಕ್ಕೆ ಸಾಧ್ಯವಾಗ್ತಿತ್ತಾ..? ಸುಬ್ರಹ್ಮಣಿಯನ್ ಸ್ವಾಮಿ ಒಬ್ಬರೇ ತಾನೇ ಏನು ಮಾಡಿಯಾರು. ಮೊನ್ನೆ ಮೊನ್ನೆ ತಾನೇ 1.86 ಲಕ್ಷ ಕೋಟಿ ರೂಪಾಯಿಯ ಕಲ್ಲಿದ್ದಲು ಹಗರಣ ಬಯಲಾಯ್ತಲ್ಲ ಇದನ್ನು ಜಗತ್ತಿನ ಮುಂದೆ ಹಿಡಿದು ತೋರಿಸಿದ್ದು ಇದೇ ನ್ಯೂಸ್ ಚಾನೆಲ್ ಗಳು ತಾನೇ...

ಇನ್ನು ರಾಜ್ಯದ ಮಟ್ಟಿಗೆ ಹೇಳೋದಾದ್ರೆ ಬಂಗಾರಪ್ಪ, ಹೆಗಡೆ, ಯಡ್ಡಿ, ರೆಡ್ಡಿ ಇವರೆಲ್ಲರ ಹಗರಣಗಳನ್ನು ಬಯಲಿಗೆ ತಂದಿದ್ದೇ ಮಾಧ್ಯಮಗಳು. ದಿನಗಟ್ಟಲೇ ಇದನ್ನೇ ಏಕೆ ತೋರಿಸ್ತೀರಿ ಅಂತಾ ಕೇಳೋರು ಒಮ್ಮೆ ಯೋಚಿಸಿ. ನೀವು ವೋಟ್ ಹಾಕಿ ಕಳುಹಿಸಿದ ಪುಣ್ಯಾತ್ಮರು ಹೀಗೆ ಮಾಡ್ತಿದ್ದಾರೆ ನೋಡಿ ಅಂತಾ ಜನರಿಗೆ ತೋರಿಸೋದು ತಪ್ಪಾ…? ನೀವು ದೇವರೆಂದು ನಂಬಿದ ಸ್ವಾಮೀಜಿಗಳು ಎಷ್ಟು ಕಪಟಿಗಳು ಅಂತಾ ನಿಮ್ಮೆದುರು ತೆರೆದಿಡೋದು ತಪ್ಪಾ..?

ಇಷ್ಟಕ್ಕೂ ಚಾನೆಲ್ ಗಳ ಮೇಲೆ ಜನರಿಗೆ ಬೇಸರ ಬರೋದಕ್ಕೆ ಕಾರಣ ಚಾನೆಲ್ ಗಳಲ್ಲ. ಸಮಾಜದಲ್ಲಿನ ಬೆಳವಣಿಗೆ. ಭ್ರಷ್ಟಾಚಾರ ಈಗಿನಷ್ಟಲ್ಲದಿದ್ರೂ ಮೊದಲೂ ಕೆಲ ಪ್ರಮಾಣದಲ್ಲಿತ್ತು. ಅವು ಬೆಳಕಿಗೆ ಬಂದಾಗ ಭ್ರಷ್ಟಾಚಾರ ಮಾಡಿದವರಿಗೆ ಬಯ್ತಾ ಇದ್ರು. ಆದರೆ ಇಂದು ಸಮಾಜದಲ್ಲಿನ ಅಕ್ರಮ ಬಯಲಾಗೋ ಪ್ರಮಾಣ ಜಾಸ್ತಿ ಆಗಿದೆ. ಅದಕ್ಕೆ ಜನ ಖುಷಿ ಪಡಬೇಕಿತ್ತು. ಭ್ರಷ್ಟರ ಮುಖವಾಡ ಕಳಚಿ ಬೀಳ್ತಿದೆಯಲ್ಲಾ ಅನ್ನೋ ಸಮಾಧಾನ ರಬೇಕಿತ್ತು. ಆದರೆ ನ್ಯೂಸ್ ಚಾನೆಲ್ ನವರಿಗೆ ಬೇರೆ ಕೆಲಸ ಇಲ್ಲಾ ಅನ್ನೋ ಮಾತು ಕೇಳಿ ಬರ್ತಿದ್ದಾವೆ.

ಹೌದು, ಈ ಅಕ್ರಮಗಳನ್ನು ನೋಡಿ ನೋಡಿ ಜನ ಬೇಸತ್ತಿದಾರೆ. ಈಗ ಅದನ್ನು ನೋಡೋದೂ ಬೇಸರ ಅನ್ನೋ ಮನಸ್ಥಿತಿಗೆ ಜನ ಬಂದಿರಬಹುದಾ..? ಹತ್ತು ವರ್ಷದ ಹಿಂದೆ ‘ಹಾಯ್ ಬೆಂಗಳೂರು’ ಪತ್ರಿಕೆ ಅಷ್ಟೊಂದು ಸೇಲ್ ಆಗೋದಕ್ಕೆ ಅದೇ ಕಾರಣ. ಯಾವುದೋ ಕೊಲೆ, ಅತ್ಯಾಚಾರ, ಭ್ರಷ್ಟಾಚಾರದ ಬಗ್ಗೆ ಬರೆದಾಗ ಅದನ್ನು ಓದೋ ಆಸಕ್ತಿ ಜನರಲ್ಲಿ ಅಂದು ಇತ್ತು. ಆದರೆ ಇಂದು ದಿನಕ್ಕೆ ಇಪ್ಪತ್ತು ಕೊಲೆ ಅತ್ಯಾಚಾರದ ಸುದ್ದಿ ಗೊತ್ತಾಗಬೇಕಿದ್ರೆ ಅದನ್ನು ಯಾರು ಓದುತ್ತಾರೆ. ಹಾಗಾಗಿ `ಹಾಯ್ ಬೆಂಗಳೂರು’ ಈ ಸ್ಥಿತಿಯಲ್ಲಿದೆ.

ಟಿವಿ ಚಾನೆಲ್ ಗಳ ಸ್ಥಿತಿ ಈಗ ಇದೇ ರೀತಿ ಆಗಿದೆ. ಸಮಾಜದಲ್ಲಿನ ಕೆಟ್ಟ ಬೆಳವಣಿಗೆಯ ಬೇಸರ ಚಾನೆಲ್ ಗಳ ಮೇಲೆ ತಿರುಗುತ್ತಿದೆ. ಅವುಗಳನ್ನು ತೋರಿಸೋದೇ ತಪ್ಪು ಅಂತಾ ಹೇಳೋದಕ್ಕೆ ಶುರು ಮಾಡಿದ್ದಾರೆ. ಕೆಲ ಚಾನೆಲ್ ಗಳು ಕೆಲ ಸುದ್ದಿಗಳನ್ನು ಸ್ವಲ್ಪ ಮಟ್ಟಿಗೆ ಅತಿ ಎನ್ನಿಸುವಷ್ಟು ತೋರಿಸಿದರೂ ಕೂಡ ಯಾರೂ ಸಮಾಜದ ಮೇಲಿನ ಕಳಕಳಿಯನ್ನು ಮೀರಿ ನಿಂತಿಲ್ಲ. ಎಲ್ಲ ಕಪಟಿಗಳ ಮುಖವಾಡ ಬಯಲಾಗಲಿ ಅನ್ನೋದು ಚಾನೆಲ್ ಗಳಿಗಿರೋ ಮೂಲ ಆಶಯ.

ಕೊನೆ ಮಾತು: ರೆಡ್ಡಿ ಎಷ್ಟು ಅಕ್ರಮ ಗಣಿಗಾರಿಕೆ ಮಾಡಿರಲಿ, ಯೆಡ್ಡಿ ಎಷ್ಟ ಭೂಮಿಯನ್ನು ನುಂಗಿರಲಿ… ಕಾಂಗ್ರೆಸ್ ನವರು ಎಷ್ಟೇ ಭ್ರಷ್ಟಾಚಾರ ಮಾಡಿರಲಿ. ಮುಂದಿನ ಚುನಾವಣೆಯಲ್ಲಿ ಜನ ಅವರಿಗೇ ಓಟ್ ಹಾಕ್ತಾರೆ. ಅವರನ್ನೇ ಆರಿಸಿ ತರ್ತಾರೆ. ಯಾಕೆಂದ್ರೆ ಇವುಗಳನ್ನೆಲ್ಲಾ ಬಯಲಿಗೆ ತಂದಿದ್ದು ಮಾಧ್ಯಮಗಳು. ಮಾಧ್ಯಮಗಳು ಹೇಳೋದೆಲ್ಲಾ ಸುಳ್ಳು ಅನ್ನೋ ಮನಸ್ಥಿತಿ..! 

Thursday, September 20, 2012

zÉñÀªÀ£ÀÄß «zÉñÀPÉÌ ªÀiÁgÀÄwÛzÉ ¸ÀézÉò ºÀjPÁgÀ£À ¥ÀPÀë

-   C±ÀévÀÜ PÉÆÃqÀUÀzÉÝ

EwºÁ¸À ¥ÀÄ£ÀgÁªÀvÀð£É DUÀÄvÀÛAvÉ. ¸ÁévÀAvÀæöå ¥ÀƪÀð ¨sÁgÀvÀPÀÆÌ, FV£À ¨sÁgÀvÀPÀÆÌ UÀªÀĤ¹zÉæ EzÀÄ §ºÀ¼À ªÀÄnÖUÉ ¤d C¤ß¸ÀÄvÉÛ. F J¥sïrL ¨sÀÆvÀzÀ ¸ÀÄ¢ÞAiÀÄ£ÀÄß £ÉÆÃqÁÛEzÉæ, CzÀgÀ §UÉÎ gÁdQÃAiÀÄ ¥ÀPÀëUÀ¼ÀÄ ªÀiÁrÛgÉÆzÀ£ÀÄß £ÉÆÃrzÉæ ºÁUÀ¤¸ÀÄvÉÛ.



PÉÃAzÀæ ¸ÀPÁðgÀ K£ÀÄ eÁjUÉ vÀA¢zÉAiÀÄ®è jÃmɯï PÉëÃvÀæzÀ°è£À «zÉò £ÉÃgÀ §AqÀªÁ¼À ºÀÆrPÉ EzÀÄ ¨ÉÃPÉÆÃ, ¨ÉÃqÀªÉÇà C£ÉÆßzÀÄ MwÛnÖVgÀ°. DzÉæ PÁAUÉæ¸ï ªÀiÁvÀæ EzÀgÀ «µÀAiÀÄzÀ°è vÀ£Àß ªÀÄÆ®ªÀ£ÀÄß ªÀÄgÉwzÁå C£ÉÆßà C£ÀĪÀiÁ£À ªÀåPÀÛªÁVÛzÉ.

PÁAUÉæ¸ï ºÀÄnÖzÉÝà ¨sÁgÀvÀzÀ ¸ÁévÀAvÀæöå ºÉÆÃgÁlPÁÌV. ªÁå¥ÁgÀPÉÌ CAvÁ ¨sÁgÀvÀPÉÌ §AzÀÄ E¯Éèà gÉhÄÃAqÁ Hj EzÀÆ £ÀªÀÄäzÉà zÉñÀ PÀtÂæ CA¢zÀÄæ ©ænµÀgÀÄ. DªÀvÀÄÛ PÉ® gÁdgÀÄUÀ¼ÀÄ EªÀgÀ£ÀÄß «Ã¼Àå PÉÆlÄÖ §gÀªÀiÁrPÉÆArzÀÄæ PÀÆqÀ. £ÀAvÀæ DzÀzÀÄÝ UÉÆvÉÛà EzÉAiÀÄ®è. £ÀªÀÄä£ÀÄß ºÀUÉ ¨ÉÃPÉÆà ºÁUÉ zÀÄr¹PÉÆAqÀÄ ¯Á¨sÀ ªÀiÁrPÉÆArzÀÄÝ  DAiÀÄÄÛ.

¨sÁgÀvÀªÀ£ÀÄß ¸ÁévÀAvÀæöå ºÉÆÃgÁlzÀ ºÉ¸ÀgÀ°è MUÀÆÎr¸À®Ä MAzÀÄ ¸ÀAWÀl£É ¨ÉÃPÁVvÀÄÛ. DUÀ d£ÀävÁ½zÉÝà ¨sÁgÀwÃAiÀÄ gÁ¶ÖçÃAiÀÄ PÁAUÉæ¸ï. ¸ÁévÀAvÀæöå ºÉÆÃgÁlzÀ°è PÁAUÉæ¸ï£À ¥ÁvÀæ JA¢UÀÆ ¥Àæ±ÁßwÃvÀ. UÁA¢üÃfAiÀĪÀgÀ ¸ÀézÉò ZÀ¼ÀĪÀ½AiÀÄ£ÀÄß  ªÀģɪÀÄ£É ¨ÁV°UÉ PÉÆAqÉÆAiÀÄÝzÀÄÝ EzÉà PÁAUÉæ¸ï. ¸ÀézÉò ªÀ¸ÀÄÛUÀ¼À£Éßà §¼À¸ÀĪÀAvÉ d£ÀgÀ°è eÁUÀÈw ªÀÄÆr¹zÀÄÝ EzÀgÀ ºÉUÀνPÉ.



DzÀgÉ EzÀ£ÀÄß «¥ÀAiÀiÁð¸À CAwgÉÆÃ, ¨sÁgÀvÀzÀ zÀÄgÀAvÀ CAwgÉÆà UÉÆwÛ®è. DzÀgÉ CAzÀÄ ¸ÀézÉò ZÀ¼ÀĪÀ½UÁV, ¸ÁévÀAvÀæöå ºÉÆÃgÁlPÁÌV zÀÄrzÀ PÁAUÉæ¸ï ¥ÀPÀëªÉà EAzÀÄ  «zÉò PÀA¥À¤UÀ¼À£ÀÄß gÉqï PÁ¥ÉÃðmï ºÁ¹ PÀjÃwzÉ. ªÁ¯ïªÀiÁmïð£ÀAvÀ ¢UÀÎd §AzÀÄ E°è£À ªÁå¥ÁjUÀ¼À£ÀÄß UÀÄr¹ UÀÄAqÁAvÀgÀ ªÀiÁqÉÆÃzÀPÉÌ C£ÀĪÀÅ ªÀiÁrPÉÆrÛzÉ. ºÁVzÉæ vÁªÀÅ UÁA¢üà PÀÄlÄA§zÀ vÀÄAqÀÄUÀ¼ÀÄ CAvÁ vÀªÀÄä£ÀÄß vÁªÀÅ ©A©¹PÉƼÉÆî PÁAUÉæ¹UÀgÀÄ EAzÀÄ ªÀiÁqÀ¨ÉÃPÁzÀzÀÄÝ EzÀ£ÉßãÁ.. ¸ÀézÉò ZÀ¼ÀĪÀ½ ºÀjPÁgÀ UÁA¢üÃfAiÀÄ ºÉ¸ÀgÀÄ ºÉýPÉÆAqÀÄ zÉñÀªÀ£ÀÄß «zÉò PÀA¥À¤UÀ½UÉ ªÀiÁgÁl ªÀiÁrÛzÉAiÀÄ®è, PÁAUÉæ¸ï£À F PÉ®¸Á£Á PÉüÉÆÃgÀÄ AiÀiÁgÀÄ E¯Áé...? FUÀ ºÉý PÁAUÉæ¸ïUÉ UÁA¢üÃf ºÉ¸ÀgÀÄ ºÉý ¨ÉÃ¼É ¨ÉìĹPÉƼÉÆîà £ÉÊwPÀvÉ EzÁå..?


¸Àj ¥Àæw¥ÀPÀëUÀ¼ÀÄ ¥Àæw¨sÀl£É ªÀiÁrÛzÁªÀ¯Áè CAvÁ ¤ÃªÀÅ ºÉüÉÆâÃzÀÄ. DzÉæ AiÀiÁªÉǧ⠥Àæw¥ÀPÀëzÀ ªÀÄÄRAqÀ£ÀÆ F ¸ÀézÉò «ZÁgÀªÀ£ÀÄß JvÀÄÛwÛ®è. AiÀiÁPÉAzÉæ EªÀgɯÁè MAzÀ¯Áè MAzÀÄ jÃwAiÀÄ°è «zÉòUÀgÀ UÀįÁªÀÄgÉÃ. ºÁUÁzÉæ PÁAUÉæ¸ï£À F ¤tðAiÀÄzÀ »AzÉ EgÉÆà «zÉò `PÉÊ' AiÀiÁªÀÅzÀÄ. MAzÀÄ ªÀµÀð »AzÀPÉÌ ºÉÆÃV £ÉÆÃr UÉÆvÁÛUÀÄvÉÛ. ªÀµÀðzÀ »AzÉ CªÉÄÃjPÀ «zÉñÁAUÀ PÁAiÀÄðzÀ²ð »®j QèAl£ï ¨sÁgÀvÀPÉÌ §A¢zÀÄæ. DUÀ CªÀgÀÄ ¨sÉÃn ªÀiÁrzÀÄÝ E§âgÀ£Éß. ªÉÆzÀ®Ä ¸ÉÆäAiÀiÁ UÁA¢ü, £ÀAvÀæ ªÀĪÀÄvÁ ¨Á£Àfð. ¸ÉÆäAiÀiÁ UÁA¢ü §½ AiÀiÁªÁUÀ J¥sïrL «ZÁgÀªÀ£ÀÄß »®j EmÉÆèÃ, DUÀ ªÉÄÃqÀªÀiï ¨ÉÆlÄÖ ªÀiÁrzÀÄÝ ªÀĪÀÄvÁ PÀqÉ. CªÀgÀÄ NPÉ CAzÉæ EªÀvÀÄÛ £Áªï gÉr. CªÀgÀ£ÀÄß MAzÀÄ ªÀiÁvÀÄ M¦à¹©r CAvÁ. DzÉæ ªÀĪÀÄvÁ EzÀPÉÌ M¦è®è. DzÉæ CªÀwÛAzÀ£Éà J¥sïrL ¨sÀÆvÀ ºÉUÀ¯ÉÃj PÀÄAwvÀÄÛ. FUÀ CzÀÄ vÀ¯É ªÉÄÃ¯É KjzÉ.

»ÃUÉà DzÉæ ªÀÄvÉÆÛAzÀÄ ¸ÁévÀAvÀæöå ºÉÆÃgÁlPÉÌ E°è£À d£ÀgÀÄ CtÂAiÀiÁUÀ¨ÉÃQzÉ. DzÉæ F ¸ÁévÀAvÀæöå ºÉÆÃgÁlzÀ°è ©ænµÀgÀ eÁUÀzÀ°è PÁAUÉæ¸ï EgÀÄvÉÛ C£ÉÆßÃzÀÄ CµÉÖà PÀlÄ ¸ÀvÀåªÁVgÀÄvÉÛ. ºÁUÀAvÁ FV£À «gÉÆÃzsÀ ¥ÀPÀëUÀ¼À°è £ÁªÀÅ UÁA¢üÃfAiÀÄ£ÀÄß ºÀÄqÀÄPÉÆà ªÀÄÆRðvÀ£À ªÀiÁqÀ¨ÁgÀzÀÄ CµÉÖÃ.

PÉÆ£É ªÀiÁvÀÄ : vÁªÀÅ UÁA¢üÃf C£ÀÄAiÀÄ¬Ä C£ÉÆßÃ, ¸ÀézÉò vÀvÀé ¥Àæw¥Á¢¸ÉÆà CuÁÚ ºÀeÁgÉ J¥sïrL «ZÁgÀzÀ°è AiÀiÁPÉ ªÀiË£ÀªÁVzÁgÉ..? ªÀiÁvÁqÀ¨ÉÃr CAvÁ  PÉÃfæªÁ¯ï ºÉýzÁgÁ..? CxÀªÁ gÁdQÃAiÀÄ ¥ÀPÀë ªÀiÁrÛë JAzÀ vÀPÀët E°è£À gÁdPÁgÀtÂUÀ¼À UÁ½ EªÀjUÀÆ §rzÀÄ©nÖzÁå..!?

Thursday, September 13, 2012

ಮನುಷ್ಯನಿಗೆ ವಯಸ್ಸಾಗಬಾರದು…. ಯಾಕೆಂದ್ರೆ…


-      ಅಶ್ವತ್ಥ ಕೋಡಗದ್ದೆ
`ಮನುಷ್ಯರಿಗೆ ವಯಸ್ಸೇ ಆಗ್ಬಾರ್ದು. ಅದರಲ್ಲೂ ನಾವು ಹತ್ತಿರದಿಂದ ನೋಡಿದವರು, ನಮ್ಮ ಪ್ರೀತಿ ಪಾತ್ರರು ಅನಿಸಿಕೊಂಡವರಿಗೆ ವಯಸ್ಸೇ ಆಗ್ಬಾರ್ದು ನೋಡಿ. ಅವರು ಯಾವಾಗ್ಲೂ ಗಟ್ಟಿಮುಟ್ಟಾಗಿ ಲವಲವಿಕೆಯಿಂದ ಇರ್ಬೇಕು. ನಾವು ತಪ್ಪು ಮಾಡಿದ್ರೆ ಗದರಿಸ್ಬೇಕು. ಒಳ್ಳೇದು ಮಾಡಿದ್ರೆ ಬೆನ್ನು ತಟ್ಟಬೇಕು.  ಇನ್ನು ನಮಗೆ ಕಲಿಸಿದ ಶಿಕ್ಷಕರಿರ್ತಾರಲ್ಲ, ಅವರಿಗಂತೂ ವಯಸ್ಸೇ ಆಗ್ಬಾರ್ದು ಅನ್ಸುತ್ತೆ. ನಾವು ಶಾಲೆಗೆ ಹೋಗ್ತಾ ಇರ್ಬೇಕಾದ್ರೆ ಅವರು ಎಷ್ಟು ಖುಷಿಖುಷಿಯಲ್ಲಿ ಓಡಾಡ್ತಾ ಇರ್ತಿದ್ರು. ಆದ್ರೆ ಈಗ ಕೆಲ ವರ್ಷದ ನಂತ್ರ ಅವರನ್ನು ನೋಡ್ತಿದ್ರೆ ಕಣ್ಣಲ್ಲಿ ನೀರು ಬರುತ್ತೆ. ಆಗ ಬರೀ ಒಂದು ಕಣ್ಸನ್ನೆಯಲ್ಲಿ ನಮ್ಮನ್ನು ಹಿಡಿತದಲ್ಲಿ ಇಡ್ಡುಕೊಂಡವರು ಅವರು. ನಮ್ಮನ್ನು ತಿದ್ದಿದವರು. ಆದ್ರೆ ಇವತ್ತು ಅದೇ ಕಣ್ಣು ಮಂಜಾಗಿದೆ. ಕಣ್ಣೊಳಗಿನ ಭಾವವನ್ನು ಗುರುತಿಸೋಣ ಅಂದ್ರೆ ಅವರು ಹಾಕಿಕೊಂಡಿರೋ ಕನ್ನಡಕ ಮರೆಮಾಡ್ತಿದೆ. ದೇವರು ನಿಜಕ್ಕೂ ಕೆಟ್ಟವನು…’ ಹೀಗೆ ನಟ ಕಿಚ್ಚ ಸುದೀಪ್ ಟಿ ವಿ ಇಂಟರ್ವ್ಯೂ ಒಂದರಲ್ಲಿ ತಮ್ಮದೇ ಟಿಪಿಕಲ್ ಸ್ಟೈಲ್ ನಲ್ಲಿ ಹೇಳ್ತಾ ಇದ್ರು. ಅವರ ಮನಸ್ಸಿನ ವೇದನೆ ಆಚೆ ಬರೋದಕ್ಕೂ ಆಗದೇ, ಒಳಗೆ ಇರೋದಕ್ಕೂ ಆಗದೇ ತೊಳಲಾಡ್ತಿತ್ತು. ತಮ್ಮ ಹೈಸ್ಕೂಲ್ ಟೈಂನ ಶಿಕ್ಷಕಿಯೊಬ್ಬರನ್ನು ನೆನೆದು ಅವರು ಮರುಗ್ತಿದ್ರು.

ಸುದೀಪ್ ಮಾತು ಕೇಳ್ತಿದ್ದಂತೆ ನನಗೆ ಕಣ್ಮುಂದೆ ಬಂದಿದ್ದು ನನ್ನ ನಾಣಿಕಟ್ಟಾ ಹೈಸ್ಕೂಲ್ ನ ಇಂಗ್ಲೀಷ್ ಮೇಡಂ ನೆನಪು. ಬಿಟ್ಟೂ ಬಿಡದೇ ಸುಮಾರು 2 ದಿನ ನನ್ನನ್ನು ಅವರ ನೆನಪು ಕಾಡ್ತಾನೇ ಇತ್ತು. ಸುಮಾರು 12-13 ವರ್ಷದ ಹಿಂದೆ ನಾನು ನಾಣಿಕಟ್ಟಾ ಹೈಸ್ಕೂಲ್ನಲ್ಲಿ ಓದಿದವನು. ಅಲ್ಲಿ ಆಗ ಇಂಗ್ಲಿಷ್ ಹೇಳಿಕೊಡ್ತಾ ಇದ್ದಿದ್ದು ಸಾವಿತ್ರಿ ಧಾರೇಶ್ವರ. ಅವರಂದ್ರೆ ಸ್ವಲ್ಪ ಮಟ್ಟಿಗೆ ಎಲ್ಲರಿಗೂ ಹೆದ್ರಿಕೆನೇ. ಆಗ ಇಂಗ್ಲಿಷ್ ಪದ್ಯ ಬಾಯಿಪಾಠ ಹಾಕ್ಬೇಕಿತ್ತು. ಬಂದಿಲ್ಲ ಅಂದ್ರೆ ಹೊಡಿತಾರೆ ಅನ್ನೋದು ಯೆಲ್ಲರಿಗೂ ಭಯ.

ಇಂಗ್ಲಿಷ್ ಮೇಡಂ ಹೊಡೆಯೋದಕ್ಕೂ ಅವರದ್ದೇ ಆದ ಟಿಪಿಕಲ್ ಸ್ಟೈಲ್ ಇತ್ತು. ಅವರು ಬರೆಯೋದಕ್ಕೆ, ಹೊಡೆಯೋದಕ್ಕೆ ಬಳಸ್ತಿದ್ದದ್ದು ಎಡಗೈಯನ್ನು. ನಿಧಾನವಾಗಿ ತಮ್ಮ ಎಡಗೈಗೆ ಕಟ್ಟಿದ್ದ ವಾಚನ್ನು ಬಿಚ್ಚಿದ್ರು ಅಂದ್ರೆ ಯಾರಿಗೋ ಇದೆ ಗ್ರಹಚಾರ ಅಂತಾನೇ ಅರ್ಥ. ವಾಚು ಬಿಚ್ಚಿ ಕೆನ್ನೆ ಮೇಲೆ  ಹೊಡೆತ ಬಿತ್ತು ಅಂದ್ರೆ ಎಂತವನೂ ಒಮ್ಮೆ ಅದುರಿ ಹೋಗಬೇಕು. ಹಾಗಿರ್ತಿತ್ತು ಪೆಟ್ಟು. ಜೊತೆಗೆ `ಮಂಗ್ಯಾಲಾ’ ಬಯ್ಯೋದೂ ಇರ್ತಿತ್ತು. ನಾನೂ ಒಂದು ಬಾರಿ ಹೊಡೆತ ತಿಂದವನು. ಆಗಲ್ಲಾ ನಾವು ಯಾಕಾದ್ರೂ ಹೊಡಿತಾರೋ ಅಂತಾ ಬೈಕೊಳ್ತಿದ್ವಿ.

ಹೈಸ್ಕೂಲೆಲ್ಲಾ ಮುಗಿದು ಸುಮಾರು ವರ್ಷ ಆಗ್ಬಿಟ್ಟಿತ್ತು. ಈಟಿವಿ ಅಂತಾ ನಾನು ಹೈದರಾಬಾದ್ ಗೆ ಹೋಗ್ಬಿಟ್ಟೆ.. ಅಲ್ಲಿಂದಾ ಒಮ್ಮೆ ಮನೆಗೆ ಬಂದಾಗ ನಾಣಿಕಟ್ಟಾ ಬಸ್ ಸ್ಟ್ಯಾಂಡ್ ನಲ್ಲಿ ಇಂಗ್ಲೀಷ್ ಮೇಡಂ ಕಂಡ್ರು. ಶರೀರ ಕುಗ್ಗಿತ್ತು. ಕಣ್ಣು ಮೊದಲಿನ ಹೊಳಪು ಕಳೆದುಕೊಂಡಿತ್ತು. ತಲೆಗೆ ಒಂದು ಸ್ಕಾರ್ಫ್ ಕಟ್ಟಿದ್ರು. ಯಾಕೋ ಬಹಳ ಬಳಲಿದಂತೆ ಕಾಣ್ತಿದ್ರು. ಮೆಡಂ ನಮಸ್ಕಾರ,  ಚೆನ್ನಾಗಿದ್ದೀರಾ..? ಅಂತಾ ಕೇಳ್ದೆ. ನಾನು ಓದಿ ಹೋದ ನಂತ್ರ  ಅದೆಷ್ಟು ಬ್ಯಾಚ್ ಬಂದು ಹೋಯ್ತೋ, ಎಷ್ಟು ಹುಡುಗರು ಬಂದು ಹೋದ್ರೋ. ಆದ್ರೆ ಅವರು ನನ್ನ ಹೆಸರನ್ನೂ ನೆನಪಿಟ್ಕೊಂಡಿದ್ರು. ಅಶ್ವತ್ಥ ನಾ ಚೆನ್ನಾಗಿದೀನಿ, ನೀ ಹೇಗಿದೀಯಾ, ಏನ್ ಮಾಡ್ತಿದೀಯಾ ಅಂತೆಲ್ಲಾ ಕೇಳಿದ್ರು. ಸುಮಾರು ಹೊತ್ತು ಮಾತಾಡಿದ್ರು. ಆದ್ರೂ ನನಗೆ ಅವರಲ್ಲಿ ಮೊದಲಿನ ಇಂಗ್ಲಿಷ್ ಮೇಡಂ ನಲ್ಲಿದ್ದ ಖದರ್ ಕಾಣ್ಲಿಲ್ಲ. ಮನೆಗೆ ಬಂದು ತಂಗಿ ಹತ್ರಾ ಇಂಗ್ಲಿಷ್ ಮೇಡಂ ಸಿಕ್ಕಿದ್ರು ಅಂತಾ ಹೇಳಿದಾಗ ಅವಳು ಹೇಳಿದ್ಲು ` ಮೇಡಂಗೆ ಪಾಪ ಕ್ಯಾನ್ಸರ್ ಅಂತೆ’

ಮೂರು ವರ್ಷದ ಹಿಂದೆ ಅವರು ತೀರಿಕೊಂಡ್ರಂತೆ ಅನ್ನಿಸಿದಾಗ ಯಾಕೋ ತುಂಬಾನೇ ಬೇಜಾರಾಯ್ತು. ಅವರದ್ದೇನು ಸಾಯೋ ವಯಸ್ಸಾ..? ಬರೀ 45-48 ವರ್ಷ ಆಗಿರ್ಬೇಕು ಅಷ್ಟೇ. ಪಾಪ ಎಷ್ಟು ಮುಂಚೆ ಹೋಗ್ಬಿಟ್ರು. ಮೊನ್ನೆ ಸುದೀಪ್ ಮಾತಾಡಿದಾಗ್ಲೂ ನನಗೆ ನೆನಪಾಗಿದ್ದು ಇದೇ, ದೇವರು ಕೆಲವೊಮ್ಮೆ ಕ್ರೂರಿ ಅನ್ನಿಸಿಬಿಡ್ತಾನೆ ಅಂತಾ.

ಮೇಸ್ಟರಿಗೆ ವಯಸ್ಸೇ ಆಗ್ಬಾರ್ದು ಅನ್ನೋ ಸುದೀಪ್ ಮಾತು ಮತ್ತೆ ಮತ್ತೆ ನೆನಪಾಗ್ತಿದೆ. ನಾಣಿಕಟ್ಟಾ ಹೈಸ್ಕೂಲ್ ನಲ್ಲಿದ ಪಿ ಆರ್ ಭಟ್ ಸರ್ ಎಲ್ಲಿದಾರೋ ಹ್ಯಾಗಿದಾರೋ ಗೊತ್ತಿಲ್ಲ. ಕನ್ನಡ ಮೇಡಂ ಯಾವ ಶಾಲೆಯಲ್ಲಿ ಕಲಿಸ್ತಿದ್ದಾರೋ. ಸತೀಶ್ ಯಲ್ಲಾಪುರ ಸರ್  ಬಿಡಿಸೋ ಕಾರ್ಟೂನ್ ಯಾಕೋ ಪತ್ರಿಕೆಗಳಲ್ಲಿ ಹೆಚ್ಚಹೆಚ್ಚು  ಬರ್ತಾ ಇಲ್ಲ. ಆದ್ರೆ ಅವರು ಯಲ್ಲಾಪುರದ ಬಿಸ್ಗೋಡಲ್ಲಿ ಇದಾರಂತೆ. ಮೊನ್ನೆ ಮೊನ್ನೆ ಸಿಕ್ಕಿದಾಗ ಅವರಲ್ಲಿ ಕಂಡಿದ್ದು ಮೊದಲಿನದ್ದೇ ಪ್ರೀತಿಯ ಮಾತು. ಎಸ್ ಎಸ್ ಹೆಗಡೆ ಸರ್ ಈಗ ಪಿಯು ಲೆಕ್ಚರ್. ಕಲಗದ್ದೆ ಕನ್ನಡ ಶಾಲೆಯಲ್ಲಿದ್ದ ಪಟಗಚ್ಚೆ ಅಕ್ಕೋರು ಯಾವುರಲ್ಲಿದಾರೋ ಗೊತ್ತಿಲ್ಲ. ಇನ್ನು ಉಂಚಳ್ಳಿ ಶಾಲೆಯಲ್ಲಿ ನನಗೆ ಮತ್ತು ಗೆಳೆಯ ನವೀನ್ ಭಟ್ ನಿಗೆ ಮಾತ್ರ ಚಾಕಲೇಟ್ ಕೊಡ್ತಿದ್ದ ಶಾರದಕ್ಕೋರು ಏನ್ ಮಾಡ್ತಿದ್ದಾರೋ ಏನೋ… ಎಲ್ಲಾದ್ರೂ ಇರಲಿ. ಎಲ್ಲರೂ ಆರಾಂ ಆಗಿರಲಿ, ನೆಮ್ಮದಿಯಿಂದಿರಲಿ.

Monday, June 25, 2012

ಅವರ ಹತ್ರಾ ಆಗಿದ್ದು ನಮ್ಮ ಹತ್ರಾ ಯಾಕೆ ಆಗಲ್ಲ..?


- ಅಶ್ವತ್ಥ ಕೋಡಗದ್ದೆ
ಗೆಳೆಯ ನವೀನ ಭಟ್ ಬಹಳ ದಿನದ ನಂತ್ರ ಮಾತಿಗೆ ಸಿಕ್ಕಿದ್ದ. ಈಗಿನ ಜಮಾನದಲ್ಲಿ ಮಾತು ಅಂದ್ರೇನು.. ಎದ್ರಿಗೆ ಸಿಕ್ಕೇ ಮಾತಾಡ್ಬೇಕು, ಮೊಬೈಲ್ ನಲ್ಲೇ ಹರಟಬೇಕು ಅಂತಿದ್ಯಾ.. ಫೇಸ್ಬುಕ್ ಇದ್ಯಲ್ಲಾ.. ಅದರಲ್ಲಿ ಸುಮ್ನೆ ಚಾಟಿಂಗ್ ಮಾಡ್ತಾ ಇದ್ವಿ. ನವೀನ್ ನನಗೆ 2ನೇ ಕ್ಲಾಸ್ ನಿಂದ ಪರಿಚಯ. ಅವ್ನು ಓದಿದ್ದು ಸೈನ್ಸ್ ಆದ್ರೂ ನನ್ನ ಪ್ರೀತಿಯ ಪತ್ರಿಕೋದ್ಯಮದ ಮೇಲೆ ಆವನಿಗೆ ಅದೇನೋ ಆಸಕ್ತಿ. ಇಂಟರ್ನೆಟ್ ನಲ್ಲಿ ಸಿಗೋ ಅದೆನೇನೋ ಲೇಖನಗಳ ಲಿಂಕ್ ಗಳನ್ನ ಆಗಾಗ ಕಳಿಸ್ತಿರ್ತಾನೆ. ನನಗೆ ಕ್ಲಾಸಿಕಲ್ ಮ್ಯೂಸಿಕ್ ಇಷ್ಟಾ ಅಂತಾ ಗೊತ್ತಾದಾಗಿಂದ ಅದೆಷ್ಟು ಮ್ಯೂಸಿಕ್ ಕೇಳ್ಸಿದಾನೋ ಲೆಕ್ಕಿಲ್ಲ. ಧಾರವಾಡದ ಕೆಯುಡಿ ನಲ್ಲಿ ಲೆಕ್ಚರರ್ ಆಗಿದ್ರೂ ಬೇಡ್ತಿ ಕಣಿವೆ ಸುತ್ತೋದರಿಂದ ಹಿಡಿದು ಅವನ ಹವ್ಯಾಸಗಳೇ ಬೇರೆ.


ಇವತ್ತೂ  ಅಷ್ಟೇ, ಸುಮ್ನೆ ಒಂದು ಲಿಂಕ್ ಕಳಿಸಿ ಟೈಮ್ ಇದ್ದಾಗ ಕೇಳು ಅಂದಾ. ನಾರಾಯಣ ರೆಡ್ಡಿ ಅನ್ನೋ ಒಬ್ಬ ಕೃಷಿಕ ಸಮಾರಂಭವೊಂದರಲ್ಲಿ ಆಡಿದ ಮಾತುಗಳವು. ಸುಮಾರು 25 ನಿಮಿಷಗಳ ಅವರ ಮಾತು ಕೇಳ್ತಾ ಕೇಳ್ತಾ ಮುಗಿದಿದ್ದೇ ಗೊತ್ತಾಗ್ಲಿಲ್ಲ. ಮುಗಿದ ಮೇಲೆ ನನಗೆ ನಿಜವಾಗ್ಲೂ ಮೂಡಿದ್ ಪ್ರಶ್ನೆನೇ  ಅವರತ್ರಾ ಆಗಿದ್ದು ನಮ್ಮತ್ರೆ ಯಾಕೆ ಆಗಲ್ಲ..?  ಅನ್ನೋದು. ಹೌದು ನಾರಾಯಣ ರೆಡ್ಡಿ ಹೇಳೋ ಪ್ರತಿಯೊಂದು ಮಾತುಗಳು ಅಕ್ಷರಶಃ ನಿಜ ಇದ್ವು. ನಮ್ಮಂತ ರೈತ ಕುಟುಂಬದವರೆಲ್ಲಾ ಒಮ್ಮೆ ಕೇಳಲೇ ಬೇಕಾದ ಮಾತುಗಳಿವು.


ಮೂಲ ಆಂಧ್ರದವರಾದ್ರೂ ದೊಡ್ಡಬಳ್ಳಾಪುರದಲ್ಲಿ ಕೃಷಿ ತಪಸ್ಸು ಮಾಡಿದವ್ರು ನಾರಾಯಣ ರೆಡ್ಡಿ. ಮೊದಲು ರಾಸಾಯನಿಕ ಕೃಷಿ ಮಾಡಿ ಒಳ್ಳೇ ಬೆಳೆ ಬಂದ್ರು ನಂತ್ರ ಕೈ ಸುಟ್ಕೊಂಡ್ರು. ಆಗ ಶುರು ಮಾಡಿದ್ದು  ಸಾವಯವ ಕೃಷಿಯನ್ನು. ಇವತ್ತು ಅವರ ಬಳಿ ಇರೋ 10 ಎಕರೆ ಜಮೀನು ಅನ್ನೋದು ಕೃಷಿ ವಿಶ್ವವಿದ್ಯಾಲಯದಂತಿದೆಯಂತೆ. ಕೃಷಿಯಲ್ಲಿ ಅವರು ಮಡದ ಪ್ರಯೋಗಗಳಿಲ್ಲ. ಈಗ ಅವರಿಗೆ ಸುಮಾರು 70 ವರ್ಷ ಇರಬಹುದೇನೋ. ( ಅವರ ಪೂರ್ತಿ ವಿವರ ಸಿಗ್ತಾ ಇಲ್ಲ. ಸಿಕ್ಕವರು ದಯವಿಟ್ಟು ತಿಳಿಸಿ ) ಆದ್ರೆ ಕೃಷಿಯಲ್ಲಿ ಅವರ ವಿಶ್ವಾಸ ಮತ್ತು ಏನಾದ್ರೂ ಹೆದರಲ್ಲ ಅನ್ನೋ ಧೈರ್ಯ ಇದೆಯಲ್ಲ ಯರಾದ್ರೂ ಮೆಚ್ಚಲೇಬೇಕು.
ಅವರ ಮಾತುಗಳ ಬಗ್ಗೆ ನಾನು ಹೆಚ್ಚು ಹೇಳಲ್ಲ. ಅವರು ಮಾತನಾಡಿದ್ದನ್ನು ಒಮ್ಮೆ ಕೇಳಿ. ನಂತ್ರ ನೀವೇ ಮಾತಾಡ್ತೀರಾ.
ಇಲ್ಲಿದೆ ನೋಡಿ ಲಿಂಕ್-

Tuesday, June 19, 2012

ಮನಸ್ಸು ಭಾರವಾದಾಗ ಮತ್ತೆ ಮೂಡಿತು ಅಕ್ಷರ

 -   ಅಶ್ವತ್ಥ ಕೋಡಗದ್ದೆ
ಒಂದು ಚಿಕ್ಕ ಆಲಸಿತನ ಒಂದು ವರ್ಷ ಸುಮ್ಮನೆ ಕುಳ್ಳಿರಿಸಿತು ಅಂದ್ರೆ ನನಗೇ ನಂಬೋದಕ್ಕೇ ಆಗ್ತಿಲ್ಲ. ಬರವಣಿಗೆಯೇ ಉದ್ಯೋಗ, ಅನ್ನ, ಜೀವನ ಎಲ್ಲಾ ಅಂದುಕೊಂಡವನು. ಆದರೆ ಅದನ್ನೇ ದೂರ ಮಾಡಿಕೊಂಡಿದ್ದೇ ಅಂದ್ರೆ ಅದಿನ್ನೆಷ್ಟು ಆಲಸಿಯಾಗಿದ್ದೆ ಅಂತಾ ಇವತ್ತು ಯೋಚನೆ ಮಾಡ್ತಾ ಇದ್ದೆ. ಒಂದು ವರ್ಷದಲ್ಲಿ ಏನೆಲ್ಲಾ ಆಗಿಹೋಯ್ತು, ಯಡಿಯೂರಪ್ಪ ಖುರ್ಚಿ ಕಳಕೊಂಡ್ರು, ಸದಾನಂದ ಗೌಡ್ರು ನಗುನಗುತಾ ಬಂದು ಕುಳಿತುಕೊಂಡ್ರು, ಆಚಾರ್ಯ ರಾಜಕೀಯ ಅಷ್ಟೇ ಅಲ್ಲ, ಜೀವನವೇ ಸಾಕಪ್ಪ ಅಂತಾ ಹೋಗ್ಬಿಟ್ರು.... ಬಳ್ಳಾರಿ ಸಾಮ್ರಾಜ್ಯ ನೆಲಸಮ ಆಯ್ತು, ರೆಡ್ಡಿ ಜೈಲಿಗೆ ಹೋದ್ರು. ಅಯ್ಯೋ ಮತ್ತೆ ಇಲ್ಲೂ ರಾಜಕೀಯನೇ ಆಗ್ಬಿಡ್ತು.

ಇನ್ನು ನನ್ನ ಬಗ್ಗೆ ಹೇಳ್ಬೇಕು ಅಂದ್ರೆ ಬೆಂಗಳೂರಿಗೆ ಬೈ ಬೈ ಹೇಳಿ ದಾವಣಗೆರೆಗೆ ಹೋಗೋದು ಬಹುತೇಕ ಖಚಿತವಾಯ್ತು. ಕೊನೆ ಹಂತದಲ್ಲಿ ಅದು ಕೈತಪ್ಪಿ ಇಲ್ಲೇ ಉಳ್ಕೊಂಡೆ. ನನ್ನ ಹಳೆಯ ಆಫೀಸ್ ನಲ್ಲಿ ಅದೇನೇನೋ ಬದಲಾವಣೆಗಳಾದ್ವು, ಸಾಕಪ್ಪಾ ಅಂತಾ ಕೈಕುಡುಗಿ ಎದ್ದುಬಿಟ್ಟೆ. ಹೊಸ ಆಫೀಸ್ ಗೆ ಬಂದೆ. ಹಾಗೂ, ಹೀಗೂ ಅಡ್ಜೆಸ್ಟ್ ಆಗಿಬಿಟ್ಟೆ.. 

ಅಷ್ಟರಲ್ಲೇ ಅಪ್ಪಯ್ಯ ಆರಾಮಿಲ್ಲದೇ ಮಲಗಿದ್ರು, ಮೊದಲಿನ ಹಾಗೇ  ಓಡಾಡೋಕೆ ಒಂದು ತಿಂಗಳೇ ಬೇಕಾಯ್ತು. ನಡುವೆನೇ ಕಳೆದ ವರ್ಷದಲ್ಲಿ ಒಂದಷ್ಟು ಖುಷಿ ಜೊತೆ ಕೆಲ ಬೇಜಾರಗಳೂ ಹೆಗಲೇರಿ ಕುಂತ್ವು. ಹೈಸ್ಕೂಲ್ ನಿಂದ ಡಿಗ್ರಿ ತನಕ ಜೊತೆಗೆ ಓದಿದ್ದ ನಾಗೇಂದ್ರ ಆಕ್ಸಿಡೆಂಟ್ ನಲ್ಲಿ ತೀರ್ಕೊಂಡು ಬಿಟ್ಟ. ಒಬ್ಬರ ಹತ್ರಾನೂ  ದೊಡ್ಡಕ್ಕೆ ಮಾತನಾಡದ, ಯಾರಿಗೂ ಕೆಟ್ಟದ್ದು ಮಾಡದ ಅವ್ನು ಇಷ್ಟು ಬೇಗ ಹೋಗ್ಬಿಟ್ನಾ ಅಂತಾ ಆಶ್ಚರ್ಯ ಆಗ್ತಿದೆ. ಜವರಾಯನೇನು ಒಳ್ಳೆಯವರು, ಕೆಟ್ಟವರು ಅಂತಾ ಬೇರೆ ಮಾಡಿ ನೋಡ್ತಾನಾ..

ಒಂದು ವರ್ಷದಲ್ಲಿ ಏನೇನೋ ನಡೆದುಹೋಯ್ತು... ಬರಿತಾ ಕುತ್ಗೊಂಡಿದ್ರೆ ಏನೆಲ್ಲಾ ಬರೀಬಹುದಿತ್ತು. ಆದ್ರೆ ಸುಮ್ನೆ ಕುತ್ಗೊಂಡು ಬಿಟ್ಟೆ. ಬರೀ ಮೊಬೈಲ್, ಫೆಸ್ಬುಕ್, ಕ್ರಿಕೆಟ್, ಸಿನಿಮಾ, ಸುತ್ತಾಟ ಅಂತಾ ಕಾಲ ಕಳೆದೆ. ನಮ್ಮ ಹಳ್ಳಿಹುಡುಗ್ರು ಬ್ಲಾಗ್ ಪ್ರತಿ ದಿನ ಅಣಕಿಸ್ತಿತು. ಕಳೆದ ವರ್ಷ ಜೂನ್ 7 ಕ್ಕೆ ಬರೆದ ಲೇಖನವೇ ಲಾಸ್ಟ್. ಕಡೆಗೆ ಒಂದಕ್ಷರ ಬರೆದಿರಲಿಲ್ಲ. ಬ್ಲಾಗ್ ಅಪ್ಡೇಟ್ ಮಾಡ್ರೋ ಅಂತಾ 'ನನ್ನೊಳಗಿನ ಕನಸು ವೆಂಕಟೇಶ್ ಹೇಳಿದ್ದ. ಹುಂ ಅಂತಾ ಹೇಳಿ ಸುಮ್ನಾಗಿಬಿಟ್ಟಿದ್ದೆ.

ಮನಸ್ಸಲ್ಲಿ ಬೇಸರ, ನೋವೆಂಬುದು ಕಲ್ಲಾದಾಗ ಅಕ್ಷರ ಕಡೆಯೋದು ನನ್ನ ಜಾಯಮಾನ. ಅದು ಮತ್ತೊಮ್ಮೆ ಹೌದು ಅಂತಾ ಸಾಭೀತಾಗಿದೆ. ಎದೆಯಲ್ಲಿ ನೋವೆಂಬ ಹುತ್ತ ಕಟ್ಟಿ ಬೆಳೀತಿದೆ. ಅಕ್ಷರವೂ ಒಡಮೂಡ್ತಿದೆ. ಮತ್ತೆ ಬರೆಯೋದಕ್ಕೆ ಕೂತಿದ್ದೇನೆ. ಈ ವಿಷಯದಲ್ಲಿ ಅವಳಿಗೆ ನಾನು ಥ್ಯಾಂಕ್ಸ್ ಹೇಳ್ಲಾ.. ಥ್ಯಾಕ್ಸ್ ಹೇಳಿದ್ರೂ ಅವಳು ಅದನ್ನು ಸ್ವೀಕರಿಸಲ್ವಲ್ಲಾ.....

Tuesday, June 7, 2011

ಅಭಿವೃದ್ಧಿಯೊಂದೇ ಮಂತ್ರವಾಗಬೇಕಾ...?

- ಅಶ್ವತ್ಥ ಹೆಗಡೆ

ಸುತ್ತಲೂ ದಟ್ಟ ಕಾನನ, ಹಚ್ಚಹಸುರಿನ ವನರಾಶಿ, ಮುಗಿಲೆತ್ತರಕ್ಕೆ ಬೆಳೆದ ಮರಗಳು, ಸ್ವಚ್ಛಂದವಾಗಿ ವಿಹರಿಸುತ್ತಿರುವ ಕಾಡುಪ್ರಾಣಿಗಳು, ಇವೆಲ್ಲದರ ಮಧ್ಯೆ ನಿಮಗೆ ಕೇಳುತ್ತದೆ ಜುಳುಜುಳು ನಿನಾದ. ಹೌದು ಅದೇ ನೀವು ಅಷ್ಟು ದೂರದಿಂದ ನೋಡಲೆಂದು ಬಂದ ..... ಜಲಪಾತ.

ಯಾವುದೇ ಪತ್ರಿಕೆ ಅಥವಾ ಟಿವಿಯಲ್ಲಿ ಜಲಪಾತವೊಂದರ ಪರಿಚಯ ಹೀಗೆ ಆರಂಭವಾಗುತ್ತದೆ. ಮುಂದುವರಿಯುವ ಪತ್ರಿಕಾ ನುಡಿಚಿತ್ರ (ಟಿವಿಗಳಿಗೂ ಇದು ಅನ್ವಯಿಸುತ್ತಿವೆ)ಆ ಜಲಪಾತ ಎಲ್ಲಿದೆ? ಹೇಗೆ ಹೋಗಬೇಕು? ಅಲ್ಲಿ ನೋಡುವುದಕ್ಕೆ ಏನೆಲ್ಲಾ ಇದೆ? ಎಂಬುದರ ಕುರಿತು ಮಾಹಿತಿ ನೀಡುತ್ತಾ ಹೋಗುತ್ತದೆ. ಇಲ್ಲಿಯವರೆಗೂ ಓಕೆ. ಆದರೆ ಮುಂದೆ ಆರಂಭವಾಗುತ್ತದೆ ನೋಡಿ...
ಆದರೆ ಈ ಸ್ಥಳ ಇಷ್ಟೊಂದು ಸುಂದರವಾಗಿದ್ದರೂ ಇಲ್ಲಿ ಮೂಲಭೂತ ಸೌಕರ್ಯ ಎಂಬುದು ಮರೀಚಿಕೆ. ಜಲಪಾತದವರೆಗೆ ಹೋಗಲು ಸರಿಯಾದ ರಸ್ತೆಗಳಿಲ್ಲ, ಅಂತೂ ಕಷ್ಟಪಟ್ಟು ಹೋದಿರಿ ಅಂದ್ರೂ ಅಲ್ಲಿ ನಿಂತುಕೊಳ್ಳುವುದಕ್ಕೂ ಸರಿಯಾದ ಸ್ಥಳ ಇಲ್ಲ, ತಿಂಡಿ ತೀರ್ಥಗಳಿಗೆ ಅಂಗಡಿ ಇಲ್ಲ, ವಸತಿ ಗೃಹಗಳಿಲ್ಲ ಇಲ್ಲಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಇನ್ನು ಟಿವಿಯಲ್ಲಾದರೆ ಇಲ್ಲಿನ ಪ್ರವಾಸಿಗರು ತಮ್ಮ ಕಷ್ಟವನ್ನು ಹೇಗೆ ತೋಡಿಕೊಳ್ಳುತ್ತಾರೆ ನೀವೇ ನೋಡಿ' ಅಂತಾ ಮೈಕ್ ಹಿಡಿದು ಒಂದು ಬೈಟ್ ತೋರಿಸಿಬಿಡುತ್ತಾರೆ.
ಹೀಗೆ ಓದಿದಾಗ ನನ್ನಲ್ಲಿ ಮೂಡುವ ಪ್ರಶ್ನೆ ಏನಂದ್ರೆ ಅಂತಹ ಪ್ರಕೃತಿಯ ಮಡಿಲಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಅಷ್ಟೊಂದು ವ್ಯವಸ್ಥೆ ಕಲ್ಪಿಸುವ ಅಗತ್ಯ ಇದೆಯಾ ? ಒಂದೊಮ್ಮೆ ವ್ಯವಸ್ಥೆ ಕಲ್ಪಿಸಿದ್ರು ಅಂತಿಟ್ಟುಕೊಳ್ಳೋಣ ಆಗ ಅವು ತಮ್ಮ ಮೂಲ ಸ್ವರೂಪ ಉಳಿಸಿಕೊಳ್ಳುತ್ತವೆಯಾ? ಚಾರಣ, ಟ್ರೆಕ್ಕಿಂಗ್ ಅನ್ನೊದಕ್ಕೆ ಅರ್ಥ ಎಲ್ಲಿ ಉಳಿಯುತ್ತೆ.?

ಉದಾಹರಣೆಗೆ ಉತ್ತರ ಕನ್ನಡದ ಮಟ್ಟಿಗೆ ಹೇಳುವುದಾದರೆ ಇಲ್ಲಿರುವ ಜಲಪಾತಗಳು ಒಂದಕ್ಕೊಂದು ಪೈಪೋಟಿ ನೀಡುವಷ್ಟು ಸುಂದರವಾದವು. ಇಲ್ಲಿಗೆ ಹೋದರೆ ಒಂದು ಸಲ ಮೈಂಡ್ ರೀಫ್ರೆಶ್ ಆಗೋದರಲ್ಲಿ ಸಂಶಯವೇ ಇಲ್ಲ. ಕಾಲುದಾರಿಯಲ್ಲಿ ಎದ್ದು ಬೀಳುತ್ತಾ, ಕಾಡಿನಲ್ಲೇ ಸಿಗುವ ಹಣ್ಣುಗಳನ್ನ ತಿನ್ನುತ್ತ ಹೋಗುವ ಆನಂದ ಅನುಭವಿಸಿದವರಿಗೊಂದೇ ಗೊತ್ತು. ಅದು ಇದ್ದಂತೆ ಬಿಟ್ಟರೇ ಚೆನ್ನ. ಸೊಕ್ಕಿದ್ದವನು ಖಂಡಿತಾ ಯಾಣ ನೋಡಿ ಬರ್ತಾನೆ. ಧೈರ್ಯ ಇದ್ದವನು ಬುರುಡೆ ಫಾಲ್ಸ್ ಅಥವಾ ವಾಟೆಹೊಳೆ ಫಾಲ್ಸ್ ಗೆ ಇಳೀತಾನೆ.

ಅದನ್ನು ಬಿಟ್ಟು ಎಲ್ಲಾ ಜಲಪಾತಗಳು, ಸ್ಥಳಗಳಿಗೆ ಆಧುನಿಕ ಸೌಲಭ್ಯ ಕಲ್ಪಿಸಿದರು ಅಂತಿಟ್ಟುಕೊಳ್ಳೋಣ, ಆಗ ಅಲ್ಲಿಯ ಸ್ಥಿತಿ ಏನಾಗುತ್ತೆ ಸ್ವಲ್ಪ ಯೋಚಿಸಿ. ಮಾನವನ ದಾಂಗುಡಿಯಿಂದ ಹೆದರಿ ಕಾಡು ಪ್ರಾಣಿಗಳು ಪೇರಿ ಕೀಳುತ್ವೆ. ಕೆಲವು ಸಂತತಿಯೂ ನಶಿಸಬಹುದು. ಇನ್ನು ಹೊಟೇಲ್, ಗೆಸ್ಟ್ ಹೌಸ್ ಗಳನ್ನಂತೂ ಮಾಡಿದ್ರೆ ಕೇಳೋದೇ ಬೇಡ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಮಯ, ಕೊಳಚೆಯ ಸಾಮ್ರಾಜ್ಯ. ಜಲಪಾತದ ನೀರಿಗೂ, ಕೆಂಗೇರಿ ತೀರ್ಥಕ್ಕೂ ವ್ಯತ್ಯಾಸವೇ ಇಲ್ಲದಂತೆ ಮಾಡಿದರೂ ಆಶ್ಚರ್ಯ ಇಲ್ಲ. ಅಭಿವೃದ್ಧಿ ಮಾಡಿದೀವಿ ಅಂತಾ ಹಣ ಕೀಳೋದಕ್ಕೂ ಸರ್ಕಾರಗಳು ಮುಂದಾಗ್ತವೆ. ಅಭಿವೃದ್ಧಿ ಹೆಸರಲ್ಲಿ ನೈಜ ಸೌಂದರ್ಯವನ್ನೇ ಕಳೆದುಕೊಂಡು ಸೊರಗುತ್ತಿರುವ ಅದೆಷ್ಟೋ ಪ್ರವಾಸಿ ಸ್ಥಳಗಳ ಉದಾಹರಣೆ ನಮ್ಮ ಕಣ್ಮುಂದಿವೆ.

ಇಷ್ಟಕ್ಕೂ ನಮ್ಮ ಮಾಧ್ಯಮಗಳು ಈ ವಿಷಯದಲ್ಲಿ ತುಂಬಾ ಎಡವುತ್ತಿವೆ ಅನ್ನಿಸ್ತಿದೆಯಾ.? ಜನರಿಗೆ ಸಹಾಯ ಮಾಡುತ್ತೇವೆ ಅಂತಾ ಹೇಳ್ತಾ ಅವರಿಗೆ ಗೊತ್ತಿಲ್ಲದಂತೆ ಪರಿಸರವನ್ನು ಹಾಳುಮಾಡುತ್ತಿವೆಯಾ.? ಅಭಿವೃದ್ಧಿ ಪತ್ರಿಕೋದ್ಯಮ ಅನ್ನೋದನ್ನ ತಪ್ಪಾಗಿ ಗೃಹಿಸಿದ್ದರಿಂದಲೇ ಇಷ್ಟೆಲ್ಲಾ ಆಗುತ್ತಿವೆಯಾ.? ಜನರೂ ಕೂಡ ಸೋಮಾರಿಗಳಾಗ್ತಾ, ಹುರುಪು ಕಳೆದುಕೊಳ್ತಾ, ಇಂತಹ ಸೌಲಭ್ಯಗಳೆಲ್ಲಾ ಬೇಕು ಅಂತಾ ಅಪೇಕ್ಷೆ ಪಡ್ತಿದ್ದಾರಾ.? ದಯವಿಟ್ಟು ಗೊತ್ತಾದವರು ಹೇಳಿ...

ಕೊನೆಹನಿ ಎಲ್ಲರೂ ಹಿಮಾಲಯದೆತ್ತರದಲ್ಲಿ ನಿಂತು ಸುಂದರ ದೃಶ್ಯವನ್ನು ನೋಡ್ಬೇಕು ಅಂತಾ ಹಿಮಾಲಯಕ್ಕೆ ಮೆಟ್ಟಿಲು ಅಥವಾ ಟ್ರ್ಯಾಲಿ ವ್ಯವಸ್ಥೆ ಮಾಡೋದಕ್ಕೆ ಸಾಧ್ಯಾನಾ ?