ಅದು ನಮ್ಮದೇ ಲೋಕ...
- ರೂಪಾ ಹೆಗಡೆ
ಹುಡುಗೀರ ಹಾಸ್ಟೇಲ್ ಅಂದ್ರೆ ಏನೋ ವಿಶೇಷ ಇರತ್ತೆ ಅಂತಾ ಇಣಿಕಿ ನೋಡೋರೇ ಹೆಚ್ಚು. ಅವರು ಅಂದು ಕೊಳ್ಳೋದ್ರಲ್ಲಿ ತಪ್ಪಿಲ್ಲ. ಅಲ್ಲಿ ವಿಶೇಷ ಇದ್ದೇ ಇರತ್ತೆ. ಯಾಕೆಂದರೆ ವೆರೈಟಿ ಹುಡುಗೀರು ಇಲ್ಲಿ ಇರ್ತಾರೆ. ಪಡ್ಡೆ ಹುಡುಗರ ಭಾಷೆಲ್ಲಿ ಹೇಳಬೇಕು ಅಂದ್ರೆ ಬಣ್ಣ ಬಣ್ಣದ ಚಿಟ್ಟೆಗಳು.
ಎಲ್ಲಿಂದಲೋ ಬಂದು ಹಾಸ್ಟೇಲ್ ನಲ್ಲಿ ಒಂದಾಗಿರ್ತಾರೆ. ಮೊದಮೊದಲು ಪರಿಚಯನೇ ಇರಲ್ಲಾ. ಹೋಗ್ತಾ ಹೋಗ್ತಾ ಸ್ವಭಾವ, ಟೇಸ್ಟ್ ಎಲ್ಲವನ್ನೂ ಅರೆದು ಕುಡಿದುಬಿಡ್ತಾರೆ. ಚಿಕ್ಕ ರೂಂನಲ್ಲಿ ನಾಲ್ಕರಿಂದ ಐದು ಮಂದಿ ಬೆಡ್ ಹಂಚಿಕೊಳ್ತಾರೆ.
ಪಾರ್ಟನರ್ ಚೆನ್ನಾಗಿದ್ದರೆ ಜೀವನ ಸೂಫರ್. ಇಲ್ಲಾ ಅಂದ್ರೆ ಬೋರೋ ಬೋರು.
ಹಾಸ್ಟೇಲ್ ತಿಂಡಿ ಎಷ್ಟು ಕೆಟ್ಟದಾಗಿರತ್ತೋ ಅದರ ಡಬಲ್ ಮಸ್ತಿ ಇಲ್ಲಿರತ್ತೆ. ರಾತ್ರಿ 12 ಆದ್ರೂ ಎಲ್ಲಾ ರೂಂನ ಲೈಟ್ ಉರಿತಾನೆ ಇರತ್ತೆ. ಬೆಳಿಗ್ಗೆ ಮಾತ್ರ ಸೂರ್ಯ ನೆತ್ತಿಗೆ ಬಂದ್ರೂ ಏಳೋ ಮನಸ್ಸಿರಲ್ಲ. ರಾತ್ರಿಯಿಡಿ ಹರಟೆ ಹೊಡೆದು ಸುಸ್ತಾಗಿರ್ತಾರೆ ಪಾಪ. ಡ್ರೆಸ್ ನಿಂದ ಆರಂಭವಾದ ಮಾತು ಎಳೆನೀರು ಮಾರೋ ಹುಡುಗನಿಂದ ಸಾಫ್ಟ್ ವೇರ್ ಎಂಜಿನಿಯರ್ ತನಕ ಬಂದ್ ಹೋಗಿರುತ್ತೆ. ಬಾಪ್ರೆ! ಏನೇನು ಮಾತಾಡಿದ್ದಾರೆ ಅನ್ನೋದು ಆಮೇಲೆ ಕೇಳಿದ್ರೆ ಅವರಿಗೆ ಗೊತ್ತಿರಲ್ಲ. ಇಬ್ಬರು ಹರಟುತ್ತಾ ಕುಳಿದ್ರೆ ಜಗತ್ತೆ ಮರೆತು ಹೋಗತ್ತೆ. ಇವರ ಜೊತೆ ಮತ್ತಿನ್ನಿಬ್ಬರು ಸೇರಿದ್ರೆ ಮಂಗನಾಟ ಆರಂಭವಾಗೋದು ಗ್ಯಾರಂಟಿ. ಒಬ್ಬರನ್ನ ಒಬ್ಬರು ಚೇಡಿಸುತ್ತಾ, ಕೂಗಾಡ್ತಾ, ಹಾಡ್ತಾ, ಡಾನ್ಸ್ ಮಾಡ್ತಾ ಎಲ್ಲವನ್ನು ಮರೆಯುತ್ತಾರೆ.
ಕೆಲವೊಮ್ಮೆ ಇದು ಹಾಸ್ಟೇಲಾ ಎನ್ನೋ ರೀತಿಯಲ್ಲಿ ಎಲ್ಲರೂ ಸುಮ್ಮನಿರ್ತಾರೆ. ಎಲ್ಲರೂ ಇದ್ದೂ ರೂಂ ಪಿನ್ ಡ್ರಾಪ್ ಸೈಲೆಂಟ್ ಆಗಿರತ್ತೆ. ಮರುಕ್ಷಣ ದನದ ದೊಡ್ಡಿ. ಪರಸ್ಪರ ಜಗಳಾ ಆರಂಭವಾದ್ರೆ ಮುಗಿದೇ ಹೋಯ್ತು. ಒಂದು ವಾರ ರೂಮೆಂಟ್ ಜೊತೆ ಮಾತಿಲ್ಲ, ಕಥೆಯಿಲ್ಲ. ಎರಡು ಜಡೆ ಸೇರಲ್ಲ ಅನ್ನೋ ಹಾಗೆ ಅಸೂಯೆ ಇದ್ದೇ ಇರತ್ತೆ. ನಾಲ್ಕು ಜನ ಒಟ್ಟಿಗೆ ಸೇರಿದ್ರೆ ಮುಗಿದೇ ಹೋಯ್ತು. ಇನ್ನಾರದ್ದೋ ಬಗ್ಗೆ ಗುಸುಗುಸು. ರೂಂನಲ್ಲಿ ಎಲ್ಲರೂ ಒಂದಾಗಿ ಒಬ್ಬಳು ಮಾತ್ರ ಬೇರೆಯಾಗಬಿಟ್ರೆ ಆಕೆ ರೂಂ ಬದಲಾಯಿಸೋದೆ ಉಳಿತು. ಇಲ್ಲ ಅಂದ್ರೆ ಕಿರಿಕಿರಿ ತಪ್ಪಿದ್ದಲ್ಲ.
ಇನ್ನು ರೂಮಿನಲ್ಲಿ ಅಥವಾ ಸುತ್ತಮುತ್ತಲ ರೂಮ್ ನಲ್ಲಿ ಒಬ್ಬಳು ಡ್ರೆಸ್, ಚಪ್ಪಲಿ ತಂದ್ಳು ಅಂದ್ರೆ ಮುಗಿದೇ ಹೋಯ್ತು. ಎಲ್ಲರೂ ಆ ರೂಂಮನಲ್ಲಿ ಜಾಂಡಾ ಹೂಡ್ತಾರೆ. ಇದರ ಬಗ್ಗೆ ತಾಸುಗಟ್ಟಲೆ ಮಾತುಕತೆಯಾಗುತ್ತೆ. ಅವಳು ತಂದಿದ್ದು ಇವಳಿಗೆ ಚಂದ ಕಂಡರೆ ಮಾರನೇ ದಿನ ಅದನ್ನು ತರಲು ಹೋಗಲೇ ಬೇಕು. ಬಾಯ್ ಫ್ರೆಂಡ್ ಇದ್ರೆ ಅವನಿಗೆ ಬಿತ್ತು ಕತ್ತರಿ ಅಂತಾನೇ ಅರ್ಥ.
ಡಯಟ್ ಗೋ, ಊಟ ಚೆನ್ನಾಗಿರಲ್ಲ ಅಂತಾನೋ ನೆಪ ಹೇಳಿ ಸ್ವಲ್ಪ ತಿನ್ನೋದು ಹಾಸ್ಟೇಲ್ ಹುಡುಗೀರ ಸ್ಟೈಲ್. ಹೊರಗಡೆ ತಿಂಡಿ ಅವರಿಗೆ ತುಂಬಾ ಇಷ್ಟ.
ಇನ್ನು, ನೀರು ಸರಿಯಾಗಿ ಬರ್ತಾ ಇಲ್ಲ, ಊಟ ಸರಿಯಿಲ್ಲ, ಹೀಗೆ ಪ್ರತಿದಿನ ಒಂದೊಂದು ವಿಷಯಕ್ಕೆ ವಾರ್ಡನ್ ಗೆ ಹಿಡಿಶಾಪ ಹಾಕೋದು ಮಾಮೂಲಿ. ಇಲ್ಲಿ ಹೊಸ ಹೊಸ ಅನುಭವಾಗತ್ತೆ. ತುಂಬಾ ವಿಷಯಗಳನ್ನಾ ಹಾಸ್ಟೇಲ್ ಕಲಿಸತ್ತೆ. ಕೆಲವೊಮ್ಮೆ ದಾರಿ ತಪ್ಪೋಕು ಇದು ಕಾರಣವಾಗತ್ತೆ.
ಹಾಸ್ಟೇಲ್ ನಲ್ಲಿ ಇರಬೇಕು ಅನ್ನೋದು ನನ್ನ ಕನಸುಗಳಲ್ಲಿ ಒಂದಾಗಿತ್ತು. ಅದರಂತೆ ಹೋದೆ. ಅಲ್ಲಿನ ಊಟ ಸರಿಯಾಗಿ ಸೇರ್ತಾ ಇರಲಿಲ್ಲ. ಕ್ಲೀನ್ ಇರಲ್ಲಾ ಅಂತಾ ಅಮ್ಮನಿಗೆ ದೂರು ಹೇಳೋದು ಕಾಮನ್ ಆಗಿತ್ತು. ಆದ್ರೆ ದಿನಹೋದಂತೆ ಹೊಸ ಹೊಸ ಫ್ರೆಂಡ್ಸ್ ಸಿಕ್ತಾ ಹೋದ್ರು. ಅವರನ್ನೆಲ್ಲಾ ಹಚ್ಕೊಂಡೆ. ಅವರು ಮಾಡೋ ಜೋಕ್, ಪರಸ್ಪರ ಕಿಚಾಯಿಸಿಕೊಳ್ಳೋದು, ಬಂಕರ್ ಬೆಡ್, ಚಿಕ್ಕ ರೂಂ, ಹಾಸ್ಟೇಲ್ ಗೆ ಬರ್ತಾ ಇದ್ದ ಹೊಸ ಹುಡುಗೀರು ಎಲ್ಲವೂ ಇಷ್ಟವಾಗ್ತಾ ಹೋಯ್ತು. ಅದೊಂದು ಸ್ವಂತ ಮನೆಯಂತೇ ಆಯ್ತು. ಎಲ್ಲೇ ಹೋಗಲಿ ಹಾಸ್ಟೇಲ್ ಗೆ ಬಂದ್ರೆ ರಿಲೀಫ್ ಆಗ್ತಾ ಇತ್ತು. ಈಗ ಆ ರೂಂ, ಅಲ್ಲಿನ ರೂಂ ಮೆಟ್ಸ್, ನನ್ನ ಬೆಡ್, ಮಸ್ತಿ ಎಲ್ಲ ನೆನಪಾಗತ್ತೆ. ಏನೋ ಒಂತರಾ ಖುಷಿ ಆಗತ್ತೆ. ಏನೇ ಆಗಲಿ ಹಾಸ್ಟೇಲ್ ಲೈಫ್ ಈಸ್ ಮಸ್ತ್ .
correct ರೂಪಾ , ಹಾಸ್ಟೆಲ್ ಲೈಫ್ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಿರ . ಹುಡುಗರು ಸಾಮಾನ್ಯವಾಗಿ ಹಾಸ್ಟೆಲ್ ನಲ್ಲಿದ್ದರೂ, ಹೊರಗಡೆ ತಿರುಗುವುದೇ ಜಾಸ್ತಿ . 8 ಗಂಟೆ ಯೊಳಗೆ ಹಾಸ್ಟೆಲ್ ಸೇರಬೇಕೆಂಬ ನಿಯಮ ಅವರಿಗಿರುವುದಿಲ್ಲ, anyway keep writing .
ReplyDeleteಚೆನ್ನಾಗಿ ಬರದ್ದಿ ರೂಪಾ ಅವ್ರೆ.. ನಾನು ನೋಡಿದ ಹಾಸ್ಟೆಲಲ್ಲಿ ಕಾಫಿ ಮಾಡಿದಾಗ ಚಂಬಲ್ಲಿ ತುಂಬಿಸಿಕೋಡು ಬರದು, ಏಳು ಘಂಟೆ ಆದ ತಕ್ಷಣನೇ ಹೋ ಅಂತ ಕೂಗದು ಎಲ್ಲಾ ನೆನ್ಪಾತು :-)
ReplyDeletesupperb articls...thanq all ..m shreedevi yadav from south africa.
ReplyDelete