- ಹರೀಶ್ ಹೆಗಡೆ
ತುಂಬಾ ದಿನಗಳಾಗಿದ್ದವು. ಮಧ್ಯಾಹ್ನದ ಸುಖ ನಿದ್ರೆಯನ್ನು ಅನುಭವಿಸದೇ.... ಆದರೆ ಇಂದು ವೀಕ್ ಎಂಡ್ ನ ಯಾವುದೇ ಪ್ರೋಗ್ರಾಂ ಇಲ್ಲದೇ ಇದ್ದುದರಿಂದ ಮಧ್ಯಾಹ್ನ ಊಟವಾದ ಕೂಡಲೇ ನಿದ್ರಾ ದೇವಿಯ ತೆಕ್ಕೆ ಸೇರಿದೆ. ಎಚ್ಚರವಾದಾಗ ಕತ್ತಲು ಆವರಿಸತೊಡಗಿತ್ತು. ಏನು ಮಾಡಲೂ ಮನಸ್ಸು ಸಹಕರಿಸುತ್ತಿರಲಿಲ್ಲ. ಸುಮ್ಮನೇ ಕಂಪ್ಯೂಟರ್ ಮುಂದೆ ಕುಳಿತು ಪೇಸ್ ಬುಕ್ ಮೇಲೆ ಕಣ್ಣಾಡಿಸತೊಡಗಿದೆ.
ಹುಬ್ಬಳ್ಳಿಯ ಹಾಸ್ಟೆಲ್ ಫ್ರೆಂಡ್ ಗೌತಮ್ ಎನೋ ಕಾಮೆಂಟ್ ಬರೆದಿದ್ದ. ಅದನ್ನು ಓದಿದವನೇ ಆನ್ ಲೈನ್ ನಲ್ಲಿ ಇರುವ ಅವನಿಗೆ ಪಿಂಗ್ ಮಾಡಿದೆ. ಅವನಿಂದ ಮೊದಲು ಬಂದ ಉತ್ತರವೇ ‘ಹರೀಶಣ್ಣ ನಂಗವು ನಿನ್ನ ತುಂಬಾ ಮಿಸ್ ಮಾಡ್ಕ್ಯತ್ತಿದ್ಯ’ ಎಂದು. ಕೂಡಲೇ ನನ್ನ ಮನಸ್ಸು ಬಾಲ್ಯದ ದಿನಗಳತ್ತ ಸರಿಯತೊಡಗಿತ್ತು. ಹಳ್ಳಿಯ ಮನೆ ಅಲ್ಲಿನ ವಾತಾವರಣ ಎಲ್ಲವೂ..........
ಆ ಬಾಲ್ಯದ ದಿನಗಳೇ ಒಮ್ಮೊಮ್ಮೆ ತುಂಬಾ ಕಾಡುತ್ತವೆ. ಇತ್ತೀಚೆಗೆ ‘ಬಾರ ಬಾರ ಆತಿ ಹೈ ಮುಜಕೋ ಮಧುರ ಯಾದ ಬಚಪನ್ ಮೇರಿ’ ಪದ್ಯ ಪದೇ ಪದೇ ನೆನಪಾಗುತ್ತಿರುತ್ತದೆ. ನಾನು ಚಿಕ್ಕವನಿದ್ದಾಗ ತುಂಬಾ ಲಿಗಾಡಿ(ಕಿಲಾಡಿ) ಸ್ವಭಾವದವನು. ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಅಪ್ಪಯ್ಯನಿಗೊಂದೇ ಹೆದರುತ್ತಿದ್ದುದು. ಮನೆಯಲ್ಲಿ ನನ್ನ ಕಿಲಾಡಿತನವನ್ನು ತಾಳಲಾರದೇ ಅಪ್ಪಯ್ಯ ತನ್ನ ಅಕ್ಕನ ಮನೆಯಲ್ಲಿ ಶಾಲೆಗೆ ಹೋಗಲು ಬಿಟ್ಟಿದ್ದ. ಆಮೇಲೆ ಹೈಸ್ಕೂಲ್ ಒಂದನ್ನು ಬಿಟ್ಟು ಉಳಿದೆಲ್ಲಾ ಎಜ್ಯುಕೇಷನ್ ಮನೆಯಿಂದ ಹೊರಗಡೆಯೇ ಮುಗಿಯಿತು.
ಇಂದಿನ ಯಾಂತ್ರಿಕ ಜಗತ್ತಿನಲ್ಲಿ ನಾವೆಲ್ಲೋ ಕಳೆದು ಹೊಗುತ್ತೇವೆನೋ ಎಂಬ ಹೆದರಿಕೆ ಬರುತ್ತದೆ. ಪ್ರತಿದಿನವೂ ಕಂಪೆನಿಯ ರೂಲ್ಸ್ ಅಂಡ್ ರೆಗ್ಯುಲೇಷನ್ ಪಾಲಿಸಲೇ ಬೇಕು. ಕಾಲೇಜಿನ ದಿನಗಳಲ್ಲಿ ಯುನಿಫಾರ್ಮ್ ತಿರಸ್ಕರಿಸಿ ಜಿನ್ಸ್ ಪ್ಯಾಂಟ್ ಧರಿಸುತ್ತಿದ್ದ ನಮಗೆ ಇಂದು ಆಫೀಸ್ ಗೆ ಹೋಗವಾಗ ಫಾರ್ಮಲ್ ಪ್ಯಾಂಟೇ ಗತಿ. ಎಕ್ಸಾಮ್ ಗೆ ಐಡೆಂಟಿಟಿ ಕಾರ್ಡ್ ತೆಗೆದುಕೊಂಡು ಹೋಗಲೂ ಬೇಸರಿಸುತ್ತಿದ್ದ ಮನಸ್ಸು ಅಂದಿನದು. ಆದರೆ ಇಂದು ಆಫೀಸ್ ಗೆ ಐಡೆಂಟಿಟಿ ಕಾರ್ಡ್ ಇಲ್ಲದೇ ಹೋದರೆ ಎಲೆಕ್ರಾನಿಕ್ ಡೋರ್ ಕೂಡ ನಮ್ಮನ್ನು ತಿರಸ್ಕರಿಸುತ್ತದೆ.
ಅಂದಿನ ಮೋಜು-ಮಸ್ತಿ, ಹುಡುಗ-ಹುಡುಗಿಯರ ಲವ್ ಸ್ಟೋರಿ, ಕೀಟಲೇ ಸ್ವಭಾವ, ಕಾಲೇಜ್ ದಿನಗಳ ಪ್ರೀತಿ ಪ್ರೇಮ, ಕ್ರಷ್ ಎಲ್ಲವೂ ನೆನಪಿನ ಬುತ್ತಿಗಳಷ್ಟೇ. ಇವತ್ತು ಯಾರಾದರೂ ನಿನ್ನ ಬೆಸ್ಟ್ ಫ್ರೆಂಡ್ ಯಾರು ಎಂದು ಕೇಳಿದರೆ ಉತ್ತರಕ್ಕೆ ತಡಕಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ನನ್ನ ಮಟ್ಟಿಗೆ ನನ್ನ ಆಫೀಸ್ ಕಂಪ್ಯೂಟರ್ ನನ್ನ ಬೆಸ್ಟ್ (ವರ್ಸ್ಟ್)ಫ್ರೆಂಡ್. ದಿನದ ಅರ್ಧದಷ್ಟು ಸಮಯವನ್ನು ಅದರ ಜೊತೆಗೇ ಕಳೆಯುತ್ತಿದ್ದೇನೆ.
ಪಿಟಿ ಕ್ಲಾಸ್ ನಲ್ಲಿ ಏನಾದರೂ ನೆಪ ಹೇಳಿ ವ್ಯಾಯಾಮದಿಂದ ತಪ್ಪಿಸಿಕೊಳ್ಳುತ್ತಿದ್ದ ನಾನು ದಿನವೂ ಬೆಳಿಗ್ಗೆ ಜಾಗಿಂಗ್ ಹೋಗಲು ತಯಾರಿ ನಡೆಸುತ್ತಿದ್ದೇನೆ.
ಇಷ್ಟೆಲ್ಲಾ ಆದ್ರೂ ಮನಸ್ಸಿನಲ್ಲಿ ಕಾಡುವ ಪ್ರಶ್ನೆ ಒಂದೇ.... ಓ ಬಾಲ್ಯವೇ ನೀನು ಮತ್ತೊಮ್ಮೆ ಬರಬಾರದೇಕೆ...???
ಕಂಪ್ಯೂಟರೇ ನಮ್ಮ ಜಗತ್ತಾಗತೊಡಗಿದೆ. ಕಳೆದ ದಿನಗಳ ನೆನಪು ನಾಳೆಗೆ ಸ್ಪೂರ್ಥಿ.
ReplyDeleteನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ಪ್ರತಿಕ್ರಿಯೆಗೆ ಧನ್ಯವಾದಗಳು.......
ReplyDeletehoragade aaduva kaala hogide
ReplyDeleteellavoo computer maya
relations saayta ide
well written harish!
ReplyDeleteShruthi.
ನೀನು ಹೇಳಿದ್ದು ೧೦೦% ಕರೆಕ್ಟು ಅನಿಸ್ತು ಹರೀಶಣ್ಣ.. ಚೆನ್ನಾಗಿ ಬರದ್ದೆ.. ಕಾಲೇಜು ಮುಗ್ದ ಮೇಲೆ ಕಂಪ್ಯೂಟರೇ ಗತಿ ಚಂಬೇಶ್ವರ ಹೇಳಿ ಹಾಡಂಗಾಯ್ದು
ReplyDelete