Tuesday, September 21, 2010

ಕಾವ್ಯ ವಿದಾಯ


- ಹರೀಶ್ ಹೆಗಡೆ
ಮೊದಲ ದಿನ ಯಾರು ಅಂತಲೇ ಗೊತ್ತಿಲ್ಲ. ಕೊನೆಯ ದಿನ ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ಸ್ನೇಹಕ್ಕಿರುವ ದೊಡ್ಡ ಶಕ್ತಿ ಇದೇ ಇರಬೇಕು. ಎರಡು ವರ್ಷದ ಕಾಲೇಜು ಜೀವನದ ಬಳಿಕ ದೂರವಾಗುತ್ತಿರುವ ಸ್ನೇಹಿತನ ಬಗ್ಗೆ ಮತ್ತೊಬ್ಬ ಗೆಳೆಯ ಆಟೋಗ್ರಾಫ್ ಬುಕ್ ನಲ್ಲಿ ಮನಸ್ಸನ್ನು ತೆರೆದಿಡುತ್ತಾನೆ. ನಾಲ್ಕಾರು ಸಾಲಿನ ಕವನದಲ್ಲಿ ಆತ ತನ್ನೆಲ್ಲ ಭಾವನೆಯನ್ನು ಹರಿಬಿಟ್ಟ ಬಗೆ ಇಲ್ಲಿದೆ.

ಸಾವು ಹುಟ್ಟಿನ ಮರ್ಮ
ಹುಟ್ಟು ಸಾವಿನ ಧರ್ಮ
ಯಾವ ನೌಕೆಯೋ... ಯಾವ ಹಾದಿಯೋ...?
ಅಂತ್ಯವಿರದ ಪಯಣ ಇದು ನಮ್ಮ ಬದುಕು !

ಬದುಕು ಹೇಗೇ ಇರಲಿ
ಸ್ನೇಹದಾಸರೆ ಇರಲಿ
ನಿನ್ನೆಲ್ಲ ಸ್ನೇಹದ ಬಳಗದಿಂದ

ಚಿರಕಾಲ ಅಳಿಯದಿರಲಿ
ಮೊಗದಲಿಹ ಮಂದಸ್ಮಿತ  
ಒಮ್ಮೊಮ್ಮೆ ಕಾಣಿಸಲಿ
ಹರ್ಷದ ಖೋಡಿ...!

ನಿನ್ನ ಬಾಳುವೆಯಲ್ಲಿ ಸಿಹಿಯೇ ತುಂಬಿರಲಿ
ಸಕ್ಕರೆ ಕಾಯಿಲೆ ಬಾರದಿರಲಿ..!
ಇಷ್ಟೆಲ್ಲ ಹಾರೈಕೆ ಶುಭಾಶಯಗಳೊಂದಿಗೆ
ನಿನಗಿದೋ ಕಾವ್ಯ ವಿದಾಯ

2 comments:

  1. Good Harish bavayya... Adre 3rd paragraph 4th line "Harshada kodi" adaralli "Ko" alpapraana aagabekkithallave???

    ReplyDelete
  2. to sandesh
    ಸಂದೇಶ್ ನಿಮ್ಮ ಅನುಮಾನ ನಿಜ. ನಮ್ಮಲ್ಲಿ ಎರಡೂ ರೀತಿಯ ಅಕ್ಷರವನ್ನೂ ಬಳಸುತ್ತಾರೆ. ಕೆರೆಯ ಕೋಡಿ ಮತ್ತು ಹುಚ್ಚು ಖೋಡಿ ಹೀಗೆ ಬಳಸುವಾಗ ಹೀಗೆ ಬಳಸುವ ರೀತಿ ಇದೆ. ಎನೇ ಇರ್ಲಿ ನಿಮ್ಮ ಸಲಹೆಗೆ ಧನ್ಯವಾದಗಳು... ಹೀಗೇ ಸಲಹೆ ನೀಡುತ್ತಾ ಇರಿ....

    ReplyDelete