Saturday, September 25, 2010

ಸ್ಕೂಟಿ ಬಾಲೆಯ ಬೆನ್ನುಹತ್ತಿ...!

-  ಹರೀಶ್ ಹೆಗಡೆ

ಬೆಂಗಳೂರಿನಂತಾ ಸಿಟಿನಲ್ಲಿ ಬಸ್ ನಲ್ಲೋ ಕ್ಯಾಬ್ ನಲ್ಲೋ ಹೋಗೋದು ಸಾಮಾನ್ಯ. ಟೈಮ್ ಪಾಸ್ ಗೆ ಏನು ಮಾಡೋದು.? ಕ್ಯಾಬ್ ನಲ್ಲಾದ್ರೆ ಅಕ್ಕ-ಪಕ್ಕದಲ್ಲಿ ಪರಿಚಯದವರು ಇರ್ತಾರೆ. ಅಲ್ಪಸ್ವಲ್ಪ ಮಾತಾಡ್ಬಹುದು. ಪ್ರತಿದಿನ ಅವರೇ ಸಿಗ್ತಾರೆ ಅಂತಾದ್ರೆ ಏನು ಅಂತಾ ಮಹಾ ಮಾತಾಡೋದು. ಅದೇ  ಮುಖ, ಅದೇ ಸಂಸಾರದ ತಾಪತ್ರಯ, ಕೇಳಿದ್ದನ್ನೇ ಎಷ್ಟು ಅಂತಾ ಕೇಳೋದು.! ನಿಧಾನಕ್ಕೆ ಕಿಟಕಿ  ಕಡೆ ತಲೆ ಹಾಕೋದು. ಇನ್ನು ಬಸ್ ನ ವಿಷಯಕ್ಕೆ ಬಂದ್ರೆ ಅಲ್ಲಿ ಪಕ್ಕದಲ್ಲಿ ಕುಳಿತವರು ಪರಿಚಯವೇ ಇರಲ್ಲ ಬಿಡಿ. ಅಲ್ಲಿ ನಮಗೆ ಸಮಯ ಕಳೆಯೋದಕ್ಕೆ ಇರೋ ಏಕೈಕ ಮಾರ್ಗ ಅಂದ್ರೆ ಕಿಟಕಿ ಪಕ್ಕ ಕುಳಿತುಕೊಂಡು ರಸ್ತೆಯಲ್ಲಿ  ಹೋಗೊ ಸುಂದರ ಹುಡುಗೀರನ್ನಾ ನೋಡೋದು...!
ಆವತ್ತು ಅಷ್ಟೇ, ಕ್ಯಾಬ್ ನಲ್ಲಿದ್ದದ್ದು ನಾನು ಮತ್ತು ಕ್ಯಾಬ್ ಡ್ರೈವರ್ ಇಬ್ರೆ. ಸುಮ್ನೆ ಹೊರಗಡೆ ನೋಡ್ತಿದ್ದೆ. ನಮಗಿಂತ ಮುಂದೆ ಒಂದು ಸ್ಕೂಟಿ. ಅದರ ಮೇಲೆ ಒಂದು ಹುಡುಗಿ. ಸಿಲಿಕಾನ್ ಸಿಟಿ ಹೆಸರಿಗೆ ಅವಮಾನ ಮಾಡ್ಬಾರ್ದು ಅನ್ನೋ ಕಾರಣಕ್ಕೆ ಅನ್ಸುತ್ತೆ ಜೀನ್ಸ್ ಪ್ಯಾಂಟ್ ಹಾಕಿದ್ಲು. ಮಾಮೂಲಿ ಟೀಶರ್ಟ್ ಇದ್ದೇ ಇತ್ತು. ಟ್ರಾಫಿಕ್ ರೂಲ್ಸ್ ಮುರಿಯೋದಕ್ಕೆ ನಾನಿರೋದು ಅನ್ನೋ ರೀತಿಯಲ್ಲಿ ತಲೆ ಮೇಲೆ ಹೆಲ್ಮೇಟ್ ಇರ್ಲಿಲ್ಲ.
ಹಿಂದಿನಿಂದ ಸ್ಕೂಟಿ ಮೇಲಿನ ಆ ಹುಡುಗಿ ನೋಡಿ ಅಭ್ಯಾಸ ಬಲದಂತೆ ಪರವಾಗಿಲ್ಲ ಚೆನ್ನಾಗಿದ್ದಾಳೆ ಅಂದೆ. ನಾನು ಹೀಗೆ ಹೇಳಿ ಇನ್ನೂ 2 ನಿಮಿಷ ಆಗಿರಲಿಲ್ಲ. ಆಗಲೇ ನಮ್ಮ ಕ್ಯಾಬ್ ಡ್ರೈವರ್ ಬಾಯಿಂದ ಉದ್ಘಾರ ಹೊರಬಿತ್ತು- ಉಹುಃ ಏನೂ ಖಾಸ್ ಇಲ್ಲ, ಹುಡುಗಿ ಚೆನ್ನಾಗಿಲ್ಲ. ನನಗೆ ಆಶ್ಚರ್ಯ, ಅದು ಹೇಗೆ ಇವನು ಹೇಳ್ದಾ ಅಂತಾ... ಆದ್ರೂ ಅವಳು ಚೆನ್ನಾಗಿದ್ದಾಳೆ ಅಂತಾ ನಾನು ಹೇಳೋದಕ್ಕೆ, ಇಲ್ಲಾ ಅಂತಾ ಅವನು ಹೇಳೋದಕ್ಕೆ. ನನಗೆ ಅವಳ ಮುಖ ನೋಡಲೇಬೇಕೆಂಬ ಆಸೆ. ಆದರೆ ಸ್ಕೂಟಿಯನ್ನ ಓವರ್ ಟೇಕ್ ಮಾಡೋದಕ್ಕೆ ಆಗ್ತಾನೇ ಇಲ್ಲಾ....
(ಮುಂದುವರಿಯುವುದು)

4 comments:

  1. ಮುಂದೇನಾಯ್ತು ..?
    ಜಾಸ್ತಿ ಕಾಯಿಸ ಬೇಡಿ...

    ReplyDelete
  2. ಇನ್ನೊಂದೆರಡು ದಿನ ಅಷ್ಟೇ.... ಮತ್ತೆ ಬಂದ್ಬಿಡ್ತೀವಿ.....

    ReplyDelete
  3. ಹಾಗಾದ್ರೆ ಕ್ಯಾಬ್ ದ್ರೈವರಣ್ಣನಿಗೆ ಕಂಡ ಸತ್ಯ ಏನು? ಹೆಚ್ಚು ಕಾಯಿಸದೆ ಬೇಗ ಹೇಳಿ......

    ReplyDelete
  4. This comment has been removed by the author.

    ReplyDelete