Monday, June 25, 2012

ಅವರ ಹತ್ರಾ ಆಗಿದ್ದು ನಮ್ಮ ಹತ್ರಾ ಯಾಕೆ ಆಗಲ್ಲ..?


- ಅಶ್ವತ್ಥ ಕೋಡಗದ್ದೆ
ಗೆಳೆಯ ನವೀನ ಭಟ್ ಬಹಳ ದಿನದ ನಂತ್ರ ಮಾತಿಗೆ ಸಿಕ್ಕಿದ್ದ. ಈಗಿನ ಜಮಾನದಲ್ಲಿ ಮಾತು ಅಂದ್ರೇನು.. ಎದ್ರಿಗೆ ಸಿಕ್ಕೇ ಮಾತಾಡ್ಬೇಕು, ಮೊಬೈಲ್ ನಲ್ಲೇ ಹರಟಬೇಕು ಅಂತಿದ್ಯಾ.. ಫೇಸ್ಬುಕ್ ಇದ್ಯಲ್ಲಾ.. ಅದರಲ್ಲಿ ಸುಮ್ನೆ ಚಾಟಿಂಗ್ ಮಾಡ್ತಾ ಇದ್ವಿ. ನವೀನ್ ನನಗೆ 2ನೇ ಕ್ಲಾಸ್ ನಿಂದ ಪರಿಚಯ. ಅವ್ನು ಓದಿದ್ದು ಸೈನ್ಸ್ ಆದ್ರೂ ನನ್ನ ಪ್ರೀತಿಯ ಪತ್ರಿಕೋದ್ಯಮದ ಮೇಲೆ ಆವನಿಗೆ ಅದೇನೋ ಆಸಕ್ತಿ. ಇಂಟರ್ನೆಟ್ ನಲ್ಲಿ ಸಿಗೋ ಅದೆನೇನೋ ಲೇಖನಗಳ ಲಿಂಕ್ ಗಳನ್ನ ಆಗಾಗ ಕಳಿಸ್ತಿರ್ತಾನೆ. ನನಗೆ ಕ್ಲಾಸಿಕಲ್ ಮ್ಯೂಸಿಕ್ ಇಷ್ಟಾ ಅಂತಾ ಗೊತ್ತಾದಾಗಿಂದ ಅದೆಷ್ಟು ಮ್ಯೂಸಿಕ್ ಕೇಳ್ಸಿದಾನೋ ಲೆಕ್ಕಿಲ್ಲ. ಧಾರವಾಡದ ಕೆಯುಡಿ ನಲ್ಲಿ ಲೆಕ್ಚರರ್ ಆಗಿದ್ರೂ ಬೇಡ್ತಿ ಕಣಿವೆ ಸುತ್ತೋದರಿಂದ ಹಿಡಿದು ಅವನ ಹವ್ಯಾಸಗಳೇ ಬೇರೆ.


ಇವತ್ತೂ  ಅಷ್ಟೇ, ಸುಮ್ನೆ ಒಂದು ಲಿಂಕ್ ಕಳಿಸಿ ಟೈಮ್ ಇದ್ದಾಗ ಕೇಳು ಅಂದಾ. ನಾರಾಯಣ ರೆಡ್ಡಿ ಅನ್ನೋ ಒಬ್ಬ ಕೃಷಿಕ ಸಮಾರಂಭವೊಂದರಲ್ಲಿ ಆಡಿದ ಮಾತುಗಳವು. ಸುಮಾರು 25 ನಿಮಿಷಗಳ ಅವರ ಮಾತು ಕೇಳ್ತಾ ಕೇಳ್ತಾ ಮುಗಿದಿದ್ದೇ ಗೊತ್ತಾಗ್ಲಿಲ್ಲ. ಮುಗಿದ ಮೇಲೆ ನನಗೆ ನಿಜವಾಗ್ಲೂ ಮೂಡಿದ್ ಪ್ರಶ್ನೆನೇ  ಅವರತ್ರಾ ಆಗಿದ್ದು ನಮ್ಮತ್ರೆ ಯಾಕೆ ಆಗಲ್ಲ..?  ಅನ್ನೋದು. ಹೌದು ನಾರಾಯಣ ರೆಡ್ಡಿ ಹೇಳೋ ಪ್ರತಿಯೊಂದು ಮಾತುಗಳು ಅಕ್ಷರಶಃ ನಿಜ ಇದ್ವು. ನಮ್ಮಂತ ರೈತ ಕುಟುಂಬದವರೆಲ್ಲಾ ಒಮ್ಮೆ ಕೇಳಲೇ ಬೇಕಾದ ಮಾತುಗಳಿವು.


ಮೂಲ ಆಂಧ್ರದವರಾದ್ರೂ ದೊಡ್ಡಬಳ್ಳಾಪುರದಲ್ಲಿ ಕೃಷಿ ತಪಸ್ಸು ಮಾಡಿದವ್ರು ನಾರಾಯಣ ರೆಡ್ಡಿ. ಮೊದಲು ರಾಸಾಯನಿಕ ಕೃಷಿ ಮಾಡಿ ಒಳ್ಳೇ ಬೆಳೆ ಬಂದ್ರು ನಂತ್ರ ಕೈ ಸುಟ್ಕೊಂಡ್ರು. ಆಗ ಶುರು ಮಾಡಿದ್ದು  ಸಾವಯವ ಕೃಷಿಯನ್ನು. ಇವತ್ತು ಅವರ ಬಳಿ ಇರೋ 10 ಎಕರೆ ಜಮೀನು ಅನ್ನೋದು ಕೃಷಿ ವಿಶ್ವವಿದ್ಯಾಲಯದಂತಿದೆಯಂತೆ. ಕೃಷಿಯಲ್ಲಿ ಅವರು ಮಡದ ಪ್ರಯೋಗಗಳಿಲ್ಲ. ಈಗ ಅವರಿಗೆ ಸುಮಾರು 70 ವರ್ಷ ಇರಬಹುದೇನೋ. ( ಅವರ ಪೂರ್ತಿ ವಿವರ ಸಿಗ್ತಾ ಇಲ್ಲ. ಸಿಕ್ಕವರು ದಯವಿಟ್ಟು ತಿಳಿಸಿ ) ಆದ್ರೆ ಕೃಷಿಯಲ್ಲಿ ಅವರ ವಿಶ್ವಾಸ ಮತ್ತು ಏನಾದ್ರೂ ಹೆದರಲ್ಲ ಅನ್ನೋ ಧೈರ್ಯ ಇದೆಯಲ್ಲ ಯರಾದ್ರೂ ಮೆಚ್ಚಲೇಬೇಕು.
ಅವರ ಮಾತುಗಳ ಬಗ್ಗೆ ನಾನು ಹೆಚ್ಚು ಹೇಳಲ್ಲ. ಅವರು ಮಾತನಾಡಿದ್ದನ್ನು ಒಮ್ಮೆ ಕೇಳಿ. ನಂತ್ರ ನೀವೇ ಮಾತಾಡ್ತೀರಾ.
ಇಲ್ಲಿದೆ ನೋಡಿ ಲಿಂಕ್-

3 comments:

  1. ದೋಸ್ತಾ... ಅವರ ಬಗೆಗಿನ ಲೇಖನದಲ್ಲಿ ನನ್ನ ಮಾತು ಬೇಕಿತ್ತಾ?. ಎಂತದೋ ಸಣ್ಣ ಮುಜುಗರ..:)

    ReplyDelete
  2. ನನಗೆ ಅವರ ಬಗ್ಗೆ ಗೊತ್ತೆ ಇತ್ತಿಲ್ಲೆ... ತುಂಬಾ ಇಪ್ರೆಸ್ ಆಗ್ಬುಟ್ಟಿ.. ಈ ಲಿಂಕ್ ಕೊಟ್ಟಿದ್ದಕ್ಕೆ ಹೀಗೆ ಥ್ಯಾಂಕ್ಸ್ ಹೇಳಿದ್ದಷ್ಟೆ..... ಥ್ಯಾಂಕ್ ಯು ದೋಸ್ತಾ...

    ReplyDelete
    Replies
    1. the continuation part of above youtube link
      http://www.youtube.com/watch?v=YLnm2Une4pg&feature=relmfu

      http://www.youtube.com/watch?v=YLnm2Une4pg&feature=relmfu

      Delete