Thursday, September 16, 2010

ಅಡಿಕೆ ದರವೋ... ನಮ್ಮೂರ ಜನರೋ...

- ಅಶ್ವತ್ಥ ಕೋಡಗದ್ದೆ
ಹಳ ದಿನಾ ಅಲ್ಲ. ಬರೀ ಹದಿನೈದು ವರ್ಷದ ಹಿಂದೆ ಹೋಗಿ ಸಾಕು... ನಮ್ಮ ಮಲೆನಾಡ ಊರುಗಳು ಹೇಗಿತ್ತು ಅಂತಾ ಒಮ್ಮೆ ಯೋಚ್ನೆ ಮಾಡಿ. ಸಂಜೆ ಹೊತ್ತಿಗೆ ಊರ ಮಧ್ಯದ ಅರಳೀ ಕಟ್ಟೆಯೇ, ಕಟ್ಟೆ ಪಂಚಾಯತಿಗೆ ಸ್ಥಳ. ಅದೂ ಇದು ಅಂತಾ ಮಾತಾಡ್ತಾ, ಅವರಿವರ ಕಾಲು ಎಳಿತಾ ಸಂಜೆ ಕಳಿಯೋದು. ಇನ್ನು ಊರಲ್ಲಿ ಎಲ್ಲೋ ಒಬ್ಬಿಬ್ಬರ ಮನೆಯಲ್ಲಿ ಟಿವಿ ಇರ್ತಿತ್ತು. ಸಂಜೆ ಆಯ್ತು ಅಂದ್ರೆ ಅವರ ಮನೆಗೆ ಎಲ್ಲರೂ ಲಗ್ಗೆ ಇಡೋದೇ. ಅವರ ಮನೆಯವ್ರು ಅಷ್ಟೇ ಪ್ರೀತಿಯಿಂದ ಮಾತನಾಡಿಸ್ತಿದ್ರು ಅನ್ನಿ.
ಬರೀ ಟಿವಿ ವಿಷಯ ಅಷ್ಟೇ ಅಂತಲ್ಲಾ. ಒಬ್ಬರಿಗೊಬ್ಬರು ಮುರಿಯಾಳು ಮಾಡ್ಕೊಳ್ತಿದ್ರು. ಅವರ ಮನೆಯ ಕೆಲಸಕ್ಕೆ ಇವ್ರು, ಇವರ ಮನೆಗೆ ಅವ್ರು. ಇನ್ನು  ಊರಿನ ಒಬ್ಬರ ಮನೆಯಲ್ಲಿ ಮಂಗಳ ಕಾರ್ಯಗಳು ನಡೀತಿದ್ರೆ ಅದು ತಮ್ಮದೇ ಮನೆಯ ವಿಶೇಷವೆನೋ ಅನ್ನೋ ರೀತಿಯಲ್ಲಿ ಎಲ್ಲರು ಪಾಲ್ಗೊಳ್ತಿದ್ರು. ಚಪ್ಪರ ಹಾಕೋದ್ರಿಂದ ಹಿಡಿದು ವಿಶೇಷದ ದಿನ ಅಡುಗೆ ಮಾಡಿದ ಪಾತ್ರೆಗಳನ್ನು ಅಟ್ಟಕ್ಕೆ ಸೇರಿಸುವವರೆಗೆ ಎಲ್ಲರದ್ದೂ ಉಪಸ್ಥಿತಿ. ಇದರ ಹೊರತಾಗಿ ಊರಲ್ಲಿ ಯಾರೋ ಒಬ್ರು ಸತ್ರು ಅಂದ್ರೂ ಕುಂಟೆ ಕಡಿಯಲು ಹೊಗೋದಕ್ಕೂ ಹಿಂದೆ ಮುಂದೆ ನೋಡ್ತಿರಲಿಲ್ಲ. ನಮ್ಮ ಊರು ಅಂದ್ರೆ, ನಮ್ಮ ಮನೆ ಎಂಬಷ್ಟೇ ಪ್ರೀತಿ, ವಿಶ್ವಾಸ.
ಈಗ ಒಂದೈದು ವರ್ಷ ಮುಂದೆ ಬನ್ನಿ. ಅಂದ್ರೆ ಈಗೊಂದು 10 ವರ್ಷದ ಹಿಂದೆ. ನಮ್ಮ ಹಳ್ಳಿ ಜನರೂ ಸ್ವಲ್ಪ ಬದಲಾದ್ರು. ಅವರು ಬದಲಾದ್ರು ಅನ್ನೋದಕ್ಕಿಂತಾ ಅಡಿಕೆಗೆ ಬಂದ ರೇಟು ಅವರನ್ನಾ ಬದಲು ಮಾಡಿಸ್ತು. ಯಾವಾಗ ಅಡಿಕೆ ಕ್ವಿಂಟಾಲ್ ಗೆ  20 ಸಾವಿರ ಮುಟ್ಟಿತೋ ಬಹುತೇಕ ಜನರ ತಲೆ ತಿರುಗಿಬಿಡ್ತು. ದುಡ್ಡು ಇದೆ, ಆಳುಗಳನ್ನು ತಗೊಂಡು ಕೆಲಸ ಮಾಡಿಸ್ತೇನೆ. ಪಕ್ಕದ ಮನೆಯವನು ನಮ್ಮನೆಗೆ ಬರೋದು ಬ್ಯಾಡ, ನಾನು ಅವರ ಮನೆಗೆ ಹೊಗೋದೂ ಇಲ್ಲಾ ಅನ್ನೋ ತೀರ್ಮಾನಕ್ಕೆ ಬಂದ್ಬಿಟ್ರು. ಮುರಿಯಾಳು ಅನ್ನೋದು ಅಲ್ಲಿಗೆ ಮುರಿದು ಬಿತ್ತು.  

ಎಲ್ಲರ ಮನೆಯಲ್ಲೂ ಟಿವಿ ಬಂದಿದ್ದಕ್ಕೆ ಅರಳಿ ಕಟ್ಟೆ ಮೇಲೆ ಕಳೆಗಳು ಬೆಳೆದ್ವು. ಮದುವೆಗಳನ್ನಾ ಕೇಳಿದಷ್ಟು ದುಡ್ಡು ಕೊಟ್ಟು ಕಲ್ಯಾಣ ಮಂಟಪದಲ್ಲಿ ಮಾಡಿ ಮುಗಿಸಿದ್ರಾಯ್ತು, ಒಂದು ದಿನದ ಕೆಲಸ, ತಲೆಬಿಸಿ ಬೇಡ ಅನ್ನೋದಕ್ಕೆ ಶುರು ಮಾಡಿದ್ರು. ಚೌತಿ ಹಬ್ಬಕ್ಕೆ ಪೇಟೆಯಲ್ಲಿ ಚಕ್ಕುಲಿ ಸಿಗುತ್ತೆ, ತಂದ್ರಾಯ್ತು. ಮತ್ತೆ ಅವರಿವರ ಮನೆಗೆ ಚಕ್ಕುಲಿ ಕಂಬಳಕ್ಕೆ ಹೋಗೋದ್ಯಾಕೆ ಅನ್ನೋ ಮನೋಭಾವ ಹೆಂಗಸರದ್ದು. ಕೇವಲ ಒಂದು ಜರ್ದಾ ಪಾನ್ ಹಾಕೋದಕ್ಕೆ 20 ಕಿಲೋಮೀಟರ್ ದೂರದ ಸಿಟಿಗೆ ಬೈಕ್ ತಗೊಂಡು ಹೋದವ್ರು ಇದ್ದಾರೆ ಅಂದರೆ ಲೆಕ್ಕಾ ಹಾಕಿ.
ದಿನಗಳೇನು ಹಾಗೇ ಉಳಿಲಿಲ್ಲಾ, ಅಡಿಕೆ ರೇಟು ಏದಷ್ಟೇ ಬೇಗ ಇಳಿದೋಯ್ತು. ಇವರ ತಲೆಗೇರಿದ ಐಶಾರಾಮಿ ಜೀವನದ ಕನಸು ಸ್ವಲ್ಪ ಇಳಿತು. ಮನೆಯಲ್ಲಿದ್ದ ಒಬ್ಬನೇ ಮಗ ಕಲಿತು ಎಂಜಿನಿಯರ್ ಆಗಿ ಬೆಂಗಳೂರು ಸೇರ್ಕೊಂಡಿದಾನೆ. ಕೆಲಸಕ್ಕೆ ಆಳುಗಳು ಸಿಗದ ಹಾಗೆ ಆಗಿದೆ. ಸಿಕ್ಕಿದ್ರೂ ಕೂಲಿ ಗಗನಕ್ಕೇರಿದೆ. ಕೊಟ್ಟು ಮಾಡ್ಸೋದಕ್ಕೆ ಕೈಯಲ್ಲಿ ದುಡ್ಡಿಲ್ಲ. ಈಗ ಐದು ವರ್ಷದಿಂದ ಈಚೆಗೆ ನಮ್ಮ ಹಳ್ಳಿ ಜನರಿಗೆ ಮತ್ತೆ ಆಚೀಚೆ ಮನೆಯವರು ನೆನಪಾಗ್ತಿದ್ದಾರೆ. ಮುರಿಯಾಳು ಮಾಡಿಕೊಳ್ಳೋಣ್ವಾ ಅಂತಾ ಕೇಳೋದಕ್ಕೆ ಶುರು ಮಾಡಿದ್ದಾರೆ.  ಪೇಟೆ ಚಕ್ಕುಲಿ ಚೆನ್ನಾಗಿ ಇರಲ್ಲಾ, ಮನೆಲ್ಲೇ ಮಾಡೋಣ್ವಾ ಅನ್ನೋ ಮನಸ್ಥಿತಿಗೆ ಬಂದಿದ್ದಾರೆ. 15 ವರ್ಷದ ಹಿಂದಿನ ದಿನಗಳು ಮತ್ತೆ ಮರುಕಳಿಸ್ತಿವೆ. ಕಾಲಚಕ್ರಾನೇ ಹಾಗಲ್ವೆ..?
ಈಗೆನೋ ಹೀಗಿದೆ. ಮತ್ತೆ ಪ್ರೀತಿ ವಿಶ್ವಾಸಗಳು ವಾಪಸ್ಸಾಗ್ತಿವೆ. ಇದು ಹೀಗೆ ಮುಂದುವರಿಯುತ್ತಾ..? ಇನ್ನೈದು ವರ್ಷದ ನಂತ್ರನೂ ನಮ್ಮೂರು ಹೀಗೇ ಇರುತ್ತಾ..? ಗೊತ್ತಿಲ್ಲ. ಬಹುಶಃ ಅಡಿಕೆಗೆ ಮತ್ತೊಮ್ಮೆ 20 ಸಾವಿರ ರೇಟು ಬರದೇ ಇದ್ರೆ ಹೀಗೆ ಇರುತ್ತೆನೋ...!!!

11 comments:

 1. hey appan hatra adkege rate baralaga heli baiskyalada matte.........:):)

  ReplyDelete
 2. ಅದಕ್ಕೆ ಅಲ್ವ ನಾವೆಲ್ಲಾ ಹಳ್ಳಿ ಬಿಟ್ಟು ಪಟ್ಟಣ ಸೇರಿದ್ದು .... anyway nice article welcome to my blog also..

  ReplyDelete
 3. to Ratnamala Hegde
  ಖಂಡಿತ ಇದಿಷ್ಟನ್ನಾ ಮನೆಯವರ ಹತ್ರಾ ಹೇಳಿದ್ರೆ ಬೈಸಿಕೊಳ್ಳೋದು ಗ್ಯಾರೆಂಟಿ... ಪ್ರತಿಕ್ರಿಯೆಗೆ ಧನ್ಯವಾದ...

  ReplyDelete
 4. to ನನ್ನೊಳಗಿನ ಕನಸು

  ವೆಂಕಟೇಶ್ ನೀವು ಹೇಳೋದು ಖಂಡಿತಾ ಸತ್ಯ... ಆದ್ರೆ ಹಳ್ಳಿಗಳಲ್ಲಿ ಆ ದಿನಗಳು ಎಷ್ಟು ಚೆನ್ನಾಗಿತ್ತಲ್ವಾ. ನಿಮಗೆ ನೆನಪಿರಬಹುದು.... ನಾವು ಕಾಲೇಜ್ ಗೆ ಹೋಗೋ ಟೈಮ್ ನಲ್ಲಿ ಹಳ್ಳಿಯಿಂದ ಹೋಗೋ ನಮ್ಮಂತವರು ಎಷ್ಟು ಪ್ರೀತಿಯಿಂದ ಇರ್ತಿದ್ವಿ... ಪರಸ್ಪರ ಸಹಕಾರನೂ ಚೆನ್ನಾಗಿತ್ತು...

  ಪ್ರತಿಕ್ರಿಯೆಗೆ ಧನ್ಯವಾದ... ಪ್ರೋತ್ಸಾಹ ಹೀಗೇ ಇರಲಿ

  ReplyDelete
 5. namma halligala bagge thulanathmaka charche madiruva ee articlenalli namma halli hudgra kalaji channagide.... Good... Go on writing village guys...

  ReplyDelete
 6. Hi, ashwath
  Blog chennagide, eshta aythu.

  ReplyDelete
 7. Adike bagge eshtu baredru mugiyalla bidi,5 years hinde adikege banda bele janaranna hage badlu madiddu nija, khali idda bhumeelu adike sasi nedoke shuru madidru, yakandre adikege banda rate hagittu, yava beleyu raithana kanmunde barlilla. namma manelu hagiddu heegene. adike bagge yake eshtella comment madthidini andre, navu adike belegarare.

  ReplyDelete
 8. Elladakkintha modlu blog name eshta aythu, yakandre nanu kuda halliyinda bandavale. halliyalli kaleda dinagale chenda. halliyalli odiddashte amele bere rajyakke prayana, egeno namma rajyakke vapas bandvi uru hattiravidru alliddashtu khushi ella, mechanical life alva.

  ReplyDelete
 9. to keshava prasad
  ಧನ್ಯವಾದಗಳು ಸರ್... ಬ್ಲಾಗ್ ಗೆ ಭೇಟಿ ನೀಡ್ತಾ ಇರಿ... ಪ್ರೋತ್ಸಾಹ ಹೀಗೇ ಇರಲಿ...

  ReplyDelete
 10. To Asha
  ಬ್ಲಾಗ್ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು....
  ನೀವು ಹೇಳ್ತಾ ಇರೋದು ನಿಜ..ಅಡಿಕೆ ಬಗ್ಗೆ ಬರಿತಾ ಹೋದ್ರೆ ಕಾದಂಬರಿನೇ ಆಗುತ್ತೆನೋ...ಹೆಚ್ಚು ಬೆಲೆ ಬಂದಾಗ ಬೆಳೆಯೋದು... ನಂತರ ಬಿಟ್ಟುಬಿಡೋದು... ಹೀಗೆ ಕಾರ್ಪೋರೇಟ್ ಸಂಸ್ಕೃತಿಯತ್ತ ರೈತರು ಹೋಗ್ತಿದ್ದಾರೆ ಅನ್ಸುತ್ತೆ..

  ಇನ್ನು ನಾವು ಹೈದರಾಬಾದ್ ನಲ್ಲಿ ಇದ್ದಾಗ್ಲೆ ಹೀಗೊಂದು ಬ್ಲಾಗ್ ನ ಕಲ್ಪನೆ ಮಾಡ್ಕೊಳ್ತಿದ್ದೆ. ಯೆಷ್ಟಂದ್ರೂ ಹಳ್ಳಿ ಅಂದರೆ ನಮಗೆ ಇಷ್ಟಾನೇ.. ನಿಮಗೆ ನೆನಪಿದೆಯಾ.. ಹೈದರಾಬಾದ್ ನಲ್ಲಿದ್ದಾಗ ಒಮ್ಮೆ ಮನೆಗೆ ಹೊರಟ್ರೆ ನಮ್ಮ ಸಂಭ್ರಮ ಹೇಗಿರ್ತಿತ್ತು ಅಂತಾ...?

  ಚೆಂದದ ಪ್ರತಿಕ್ರಿಯೆಗೆ ಧನ್ಯವಾದಗಳು...

  ReplyDelete