- ಹರೀಶ್ ಹೆಗಡೆ
ಇವತ್ತು ನಾಲ್ಕು ಜನ ಒಟ್ಟಿಗೆ ಸೇರಿದ್ರು ಅಂದ್ರೆ ಅಲ್ಲಿ ನೂರೆಂಟು ವಿಷಯ ಚರ್ಚೆಗೆ ಬರೋದು ಸಾಮಾನ್ಯ. ಹೀಗೆ ಮಾತಾಡ್ತಾ ಅವರು ಹೋಗಿ ಮುಟ್ಟೋದು ಇವತ್ತು ಬದುಕೋದಕ್ಕೆ ಆಗೋಲ್ಲ ಮಾರಾಯ್ರೆ. ಏನು ಮಾಡೋದು, ಎಲ್ಲಾ ವಸ್ತುವಿನ ಬೆಲೆ ಗಗನಕ್ಕೇರಿಬಿಟ್ಟಿವೆ. ಹೀಗೆ ಆದ್ರೆ ಬದುಕೋದಕ್ಕೆ ಸಾಧ್ಯನಾ..? ಪೆಟ್ರೋಲ್ ಬೆಲೆ ಅಂತೂ ಕೇಳಲೇಬೇಡಿ. ಸ್ವಲ್ಪೇ ದಿನದಲ್ಲಿ ಲೀಟರ್ ಗೆ ನೂರು ರೂಪಾಯಿಗೆ ಹೋಗಿ ಮುಟ್ಬುತ್ತೆನೋ ಅಂತಿರ್ತಾರೆ.
ಇವತ್ತು ನಾಲ್ಕು ಜನ ಒಟ್ಟಿಗೆ ಸೇರಿದ್ರು ಅಂದ್ರೆ ಅಲ್ಲಿ ನೂರೆಂಟು ವಿಷಯ ಚರ್ಚೆಗೆ ಬರೋದು ಸಾಮಾನ್ಯ. ಹೀಗೆ ಮಾತಾಡ್ತಾ ಅವರು ಹೋಗಿ ಮುಟ್ಟೋದು ಇವತ್ತು ಬದುಕೋದಕ್ಕೆ ಆಗೋಲ್ಲ ಮಾರಾಯ್ರೆ. ಏನು ಮಾಡೋದು, ಎಲ್ಲಾ ವಸ್ತುವಿನ ಬೆಲೆ ಗಗನಕ್ಕೇರಿಬಿಟ್ಟಿವೆ. ಹೀಗೆ ಆದ್ರೆ ಬದುಕೋದಕ್ಕೆ ಸಾಧ್ಯನಾ..? ಪೆಟ್ರೋಲ್ ಬೆಲೆ ಅಂತೂ ಕೇಳಲೇಬೇಡಿ. ಸ್ವಲ್ಪೇ ದಿನದಲ್ಲಿ ಲೀಟರ್ ಗೆ ನೂರು ರೂಪಾಯಿಗೆ ಹೋಗಿ ಮುಟ್ಬುತ್ತೆನೋ ಅಂತಿರ್ತಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಆಗೋ ಛಾನ್ಸ್ ಇಲ್ವೆ ಇಲ್ಲಾ. ಇದ್ದಿರೋ ಸಂಪನ್ಮೂಲವೇ ಮುಗಿತಾ ಬಂದಿರೋವಾಗ ಕಡಿಮೆ ಬೆಲೆಗೆ ಪೆಟ್ರೋಲಿಯಂ ಉತ್ಪನ್ನಗಳನ್ನಾ ನಮಗೆ ಮಾರೋದಕ್ಕೆ ಅರಬ್ ದೇಶದವ್ರೇನು ಮೂರ್ಖರಾ..? ಹಾಗಾದ್ರೆ ಇದಕ್ಕೆ ಪರಿಹಾರ ಇಲ್ವಾ..? ಬೆಲೆ ಕಡಿಮೆ ಮಾಡೋಕೆ ಸರ್ಕಾರದ ಕೈಯ್ಯಲ್ಲಿ ಆಗೋಲ್ವಾ..? ಆಗೋದಾದ್ರೆ ಹೇಗೆ..?
ಪರಿಹಾರ ಇದೆ. ಸಬ್ಸಿಡಿ ಕೊಟ್ಟು ಬಿಡೋದು. ಆದರೆ ಇದು ತಾತ್ಕಾಲಿಕ ಪರಿಹಾರ ಎಂಬಂತೆ ಕಂಡರೂ ಮುಂಬರುವ ದಿನಗಳಲ್ಲಿ ಮಾರಕವೇ. ಸಬ್ಸಿಡಿ ಕೊಡೋದ್ರಿಂದಾ ಬೆಲೆ ಕಡಿಮೆ ಆಗುತ್ತಲ್ಲಾ.. ನಮಗೂ ಚೆನ್ನಾಗಾಯ್ತು ಅನ್ಬಹುದು ನೀವು.. ಆದ್ರೆ ಸಬ್ಸಿಡಿ ಕೊಟ್ಟ ತಕ್ಷಣ ಸಮಸ್ಯೆ ಅಲ್ಲಿಗೆ ಕೊನೆಯಾಗಲ್ಲ. ಮತ್ತೊಂದು ಸಮಸ್ಯೆ ಆರಂಭವಾಗುತ್ತೆ. ಜನರ ಮೇಲೆ ಹೊರೆ ಕಡಿಮೆಯಾಗೋ ಬದಲು ಹೆಚ್ಚುತ್ತಾ ಹೋಗುತ್ತೆ.
ಹೇಗೆ ಅನ್ನೋದನ್ನಾ ನಿಮಗೆ ಒಂದು ಸರಳ ಉದಾಹರಣೆ ಮುಖಾಂತರ ಹೇಳ್ತೇನೆ. 60ರ ದಶಕದಲ್ಲಿ ಹಸಿರು ಕ್ರಾಂತಿ ಹೆಸರಲ್ಲಿ ಕೃಷಿಗೆ ಪ್ರೋತ್ಸಾಹ ನೀಡ್ತೇವೆ ಅಂತು ಕೇಂದ್ರ ಸರ್ಕಾರ. ಬೆಳೆಗಳಿಗೆ ಹಾಕೋ ಯೂರಿಯಾ ಗೊಬ್ಬರಕ್ಕೆ ಧಾರಾಳವಾಗಿ ಸಬ್ಸಿಡಿ ಕೊಡ್ತು. ಜನರೂ ಮಳ್ಳುಹತ್ತಿ ಬಳಸಿದ್ದೇ ಬಳಸಿದ್ದು. ಸ್ವಲ್ಪ ದಿನಾ ಅಷ್ಟೆ, ಡ್ರಗ್ಸ್ ಗೆ ಮನುಷ್ಯನ ದೇಹ ಒಗ್ಗಿಕೊಳ್ಳತ್ತಲ್ಲಾ, ಹಾಗೆ ಕೃಷಿ ಭೂಮಿಗಳು ಯೂರಿಯಾಕ್ಕೆ ಒಗ್ಗಿಕೊಂಡುಬಿಟ್ವು. ಭೂಮಿ ಫಲವತ್ತತೆಯನ್ನಾ ಕಳೆದುಕೊಂಡುಬಿಡ್ತು. ಕ್ರಮೇಣ ಸರ್ಕಾರ ಯೂರಿಯಾದ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಿಬಿಡ್ತು. ರೈತರು ಪೀಕಲಾಟಕ್ಕೆ ಸಿಕ್ಕಿಕೊಂಡಿದ್ದೇ ಆಗ. ಗೊಬ್ಬರ ಹಾಕದಿದ್ರೆ ಬೆಳೆ ಬೆಳೆಯಲ್ಲಾ. ಗೊಬ್ಬರ ಹಾಕೋದಕ್ಕೆ ರೈತರ ಕೈಯಲ್ಲಿ ದುಡ್ಡಿಲ್ಲ. ಹಲ್ಲು-ಕಡಲೆ ಎರಡೂ ಇಲ್ಲಾ ಅನ್ನೋ ಅತಂತ್ರ ಸ್ಥಿತಿ ರೈತರದ್ದು.
ಈಗ ಪೆಟ್ರೋಲ್ ಗೆ ಸಬ್ಸಿಡಿ ಕೊಟ್ರೂ ಆಗೋದು ಅದೇ ಸಮಸ್ಯೆ. ಇವತ್ತು ಸಬ್ಸಿಡಿ ಕೊಟ್ಟಾಕ್ಷಣ ಪೆಟ್ರೋಲ್ ಬೆಲೆ ಸ್ವಲ್ಪ ಕಡಿಮೆ ಆಗ್ಬಹುದು. ಇನ್ನೊಂದಿಷ್ಟು ವಾಹನಗಳು ರಸ್ತೆಗೆ ಇಳಿಬಹುದು. ಆದ್ರೆ ದಿನಗಳು ಹೀಗೇ ಇರೋದಿಲ್ವಲ್ಲಾ. ನಾಳೆ ಸರ್ಕಾರ ಮತ್ತೆ ಸಬ್ಸಿಡಿ ಕಡಿಮೆ ಮಾಡ್ಬಹುದು. ಪೆಟ್ರೋಲ್ ರೇಟು ಮತ್ತಷ್ಟು ತುಟ್ಟಿ ಆಗ್ಬಹುದು. ಆವಾಗ ತಂದ ವಾಹನಗಳನ್ನೆಲ್ಲಾ ಮನೆಯಲ್ಲಿ ಇಟ್ಕೊಳ್ಳೋದಕ್ಕೆ ಆಗುತ್ತಾ. ಸಾಧ್ಯ ಇಲ್ಲಾ. ಸೆಕೆಂಡ್ ಹ್ಯಾಂಡ್ ಅಂತೂ ಆಗ ತಗೊಳ್ಳೋವ್ರು ಇರಲ್ಲಾ. ಇನ್ನು ಈಗ ವಿತರಿಸುತ್ತಿರುವ ಆಯಿಲ್ ಬಾಂಡ್ ಗಳನ್ನು ಬಿಡಿಸಿಕೊಳ್ಳೋದಕ್ಕೆ ಸರ್ಕಾರ ಮುಂದಿನ ದಿನಗಳಲ್ಲಿ ಜನರ ಮೇಲೆ ತೆರಿಗೆ ಹೇರಬಹುದು. ಆಗ ವಾಹನ ಹೊಂದಿರುವವರು ಅಲ್ಲದೆ ಜನಸಾಮಾನ್ಯರ ಮೇಲೂ ಹೊರೆ ಬೀಳುತ್ತೆ.
ಅದಕ್ಕಾಗಿ ಒಮ್ಮೆಲೇ ಪೆಟ್ರೋಲ್ ಮೇಲೆ ಸಬ್ಸಿಡಿ ನೀಡಿ ಅಂತಾ ಹೇಳೋದು ಸಮಸ್ಯೆಗೆ ಪರಿಹಾರ ಅನ್ಸಲ್ಲಾ. ಯಾಕೆಂದ್ರೆ ಯೂರಿಯಾಕ್ಕೆ ಆದ ಕಥೆ ಇದಕ್ಕೆ ಆಗೋದು ಬೇಡಾ. ಹಾಗಾದರೆ ಏನು ಮಾಡ್ಬೇಕು..? ಪರ್ಯಾಯ ಮತ್ತು ಹೆಚ್ಚಿನ ಮೈಲೇಜ್ ಕೊಡೋ ಇಂಧನಗಳತ್ತಾ ಗಮನ ಕೊಡ್ಬೇಕು. ಮರುಬಳಕೆ ಇಂಧನಗಳನ್ನು ಹೆಚ್ಚು ಬಳಸೋದಕ್ಕೆ ಸಾಧ್ಯನಾ ತಾ ಯೋಚ್ನೆ ಮಾಡ್ಬೇಕು. ಇವುಗಳ ಸಂಶೋಧನೆಗೆ ಸರ್ಕಾರ ಹೆಚ್ಚಿನ ಸಹಾಯಧನವನ್ನ ನೀಡ್ಬೇಕು.
ಎಲ್ಲಕ್ಕಿಂತ ಹೆಚ್ಚಾಗಿ ನಾವು ಅನಗತ್ಯ ಕಾರಣಕ್ಕೆ ವಾಹನಗಳನ್ನಾ ಬಳಸೋದನ್ನಾ ನಿಲ್ಲಿಸಬೇಕು.
Good Harish bavayya... Keep on Writing....
ReplyDeleteto sandesh
ReplyDeleteಧನ್ಯವಾದಗಳು.. ಪ್ರೋತ್ಸಾಹ ಹೀಗೇ ಇರಲಿ