Thursday, September 23, 2010

ಬೀಳುವುದೆಲ್ಲಾ ಬಿದ್ದು ಹೋಗಲಿ.......!


- ಅಶ್ವತ್ಥ ಕೋಡಗದ್ದೆ 


ನಾಗಿದೆ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ? ಇಷ್ಟೊಂದು ಮಾನ ಹರಾಜು ಹಾಕಿಸಿಕೊಳ್ಳುವ ಮಟ್ಟಕ್ಕೆ ಇಳಿದುಬಿಟ್ಟಿತಲ್ಲಾ...? ಒಂದು ಕಾಮನ್ವೆಲ್ತ್ ಗೇಮ್ ನಡೆಸೋದಕ್ಕೆ ಹೋಗಿ ಅವಾಂತರಗಳನ್ನಾ ಸೃಷ್ಟಿಸಿಬಿಡ್ತಲ್ಲಾ. ಯಾವ ಪುರುಷಾರ್ಥಕ್ಕಾಗಿ ಇದೆಲ್ಲಾ ಬೇಕಿತ್ತು ಅಂತಾ ಪ್ರಶ್ನೇ ಮಾಡಲೇ ಬೇಕಾದ ಸ್ಥಿತಿ ಬಂದಿದೆ. ನಾಗರಿಕರಾಗಿ ಪ್ರಶ್ನೆ ಮಾಡುವ ಅರ್ಹತೆ ನಮಗೂ ಇದೆ ಅಲ್ವಾ? 

ಭಾರತದಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ ಅನ್ನೋ ಘೋಷಣೆ ಹೊರಬಿದ್ದ ದಿನದಿಂದಲ್ಲೇ ವಿವಾದ ಅನ್ನೋ ಬೇತಾಳ ಬೆನ್ನುಹತ್ತಿಬಿಟ್ಟಿತ್ತು. ಮೊದಲಿಗೆ ಕ್ರೀಡಾಗ್ರಾಮದ ನಿರ್ಮಾಣ ಸರಿಯಾಗಿ ಆಗ್ತಿಲ್ಲ ಅನ್ನೋ ಆರೋಪ ಕೇಳಿ ಬಂತು. ಇನ್ನು ಹಲವು ದಿನ ಇದೆಯಲ್ಲ ರೆಡಿ ಆಗ್ಬೊದು ಅಂತಾ ಎಲ್ಲರೂ ಸುಮ್ನಾದ್ರು. ಬಳಿಕ ಸದ್ದು ಮಾಡಿದ್ದು ಭ್ರಷ್ಟಾಚಾರದ ಕರ್ಮಕಾಂಡ. ಇದನ್ನ ಬಯಲಿಗೆಳೆಯಲು ವಿದೇಶಿ ಮಾಧ್ಯಮವೇ ಬರಬೇಕಾಯ್ತು. ಆದರೆ ಇದೆಲ್ಲಾ ಬೆಳಕಿಗೆ ಬರುವ ಹೊತ್ತಿಗೆ ಕಾಮನ್ವೆಲ್ತ್ ಸಂಘಟನಾ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ನೂರಾರು ಕೋಟಿ ರೂಪಾಯಿ ತಿಂದು ಡರ್ ಅಂತಾ ತೇಗಿಬಿಟ್ಟಿದ್ರು. ದೇಶದ ಕ್ರೀಡೆ ಉದ್ದಾರ ಮಾಡ್ರಿ, ನಾಲ್ಕು ಜನಾ ನೋಡೋ ಹಾಗೆ ಕಾಮನ್ವೆಲ್ತ್ ನಡೆಸ್ರಯ್ಯಾ ಅಂದ್ರೆ ತಾವು ಮಹಡಿಮೇಲೆ ಮಹಡಿ ಇರೋ ಮನೆ ಕಟ್ಟಿ ಬೆಚ್ಚಗೆ ಹೊದ್ದು ಮಲಗಿಬಿಟ್ರು. 


ಇಷ್ಟೆಲ್ಲಾ ಸಾಲದು ಅನ್ನೋಹಾಗೆ ಕ್ರೀಡಾಂಗಣ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ಬೇರೆ. ಇದು ಬೆಳಕಿಗೆ ಬರ್ಬೇಕಾದ್ರೆ ಕ್ರೀಡಾಂಗಣದ ಮೇಲ್ಛಾವಣಿನೇ ಕುಸಿಯಬೇಕಾಯ್ತು. ಮಂಗಳವಾರವಷ್ಟೇ ನೆಹರು ಕ್ರೀಡಾಂಗಣದ ಮೇಲ್ಸೇತುವೆ ಕುಸಿದಿತ್ತು. ಮತ್ತೆ ಮರುದಿನವೇ ವೇಟ್ ಲಿಫ್ಟಿಂಗ್ ಕ್ರೀಡಾಂಗಣದ ಮೇಲ್ಛಾವಣಿ ನೆಲಕಚ್ಚಿದೆ. ಸಾಕಲ್ಲ ಇವೆರಡು ಭಾರತದ ಮಾನ ಹರಾಜು ಹಾಕಲು.!


ಗೇಮ್ಸ್ ಆರಂಭವಾಗೋದಕ್ಕೆ ಬರೀ 8-10 ದಿನ ಇರೋವಾಗ ಹೀಗೆಲ್ಲಾ ಆದ್ರೆ ಯಾವ ಕ್ರೀಡಾಪಟುಗಳು ಆಡೋದಕ್ಕೆ ಬರ್ತಾರೆ ಹೇಳಿ. ಅದಕ್ಕೇ ಕೆನಡಾ ಮತ್ತು ಇಂಗ್ಲೆಂಡ್ ಕ್ರೀಡಾಪಟುಗಳು ಇಲ್ಲಿಗೆ ಬರೋದಕ್ಕೆ ಹಿಂದೆಮುಂದೆ ನೋಡ್ತಿರೋದು. ಅದ್ರಲ್ಲಿ ಅವರ ತಪ್ಪಿಲ್ಲ.. ಜೀವ ಇದ್ರೆ ಬೇಡಿಕೊಂಡಾದ್ರೂ ತಿನ್ತೇನೆ ಅನ್ನೋ ಕಾಲದಲ್ಲಿ ಈ ಸಂಘಟನಾಕಾರರನ್ನು ನಂಬಿಕೊಂಡು ಅವರಾದ್ರೂ ಹೇಗೆ ಬರ್ತಾರೆ...?

ಇದಕ್ಕೆಲ್ಲಾ ಒಬ್ಬೊಬ್ಬರು ಒಂದೊಂದು ಕಾರಣ ನೀಡ್ದಿದಾರೆ. ಮಳೆ, ಗಾಳಿ, ಮತ್ತೊಂದು ಮಗದೊಂದು ಹೀಗೆ ತರಹೇವಾರಿ ಕಾರಣಗಳು. ಇನ್ನೂ 10 ದಿನ ಇದೆ. ಸರಿಮಾಡ್ಬಿಡ್ತೀವಿ ಅನ್ನೋ ಭರವಸೆಗಳು. 8 ವರ್ಷದಲ್ಲೇ ಇವರ ಕೈಯ್ಯಲ್ಲಿ  ಮಾಡೋದಕ್ಕೆ ಆಗದಿದ್ದು ಇನ್ನು 10 ದಿನದಲ್ಲಿ ಆಗ್ಬಿಡುತ್ತೆ ಅಂತಾ ನಂಬೋ ಮುಟ್ಟಾಳರು ನಾವು ಅಂತಾ ತಿಳಿದುಬಿಟ್ಟಿದ್ದಾರೆ ಆಡಳಿತ ನಡೆಸೋ ಮಂದಿ.

ಅದು ಅವರ ತಪ್ಪೂ ಅಲ್ಲಾ ಬಿಡಿ. ಅವರ ರಕ್ತಗುಣಾನೇ ಹಾಗೆ. ಯಾಕೆಂದ್ರೆ ಆಡಳಿತ ಮಂಡಳಿ ಇರ್ಬಹುದು ಅಥವಾ ಟಾಪ್ ಲೇವಲ್ ಟೀಮ್ ಇರ್ಬಹುದು. ಎಲ್ಲಾ ಅಧಿಕಾರ ಇದ್ದದ್ದು ರಾಜಕಾರಣಿಗಳ ಕೈಯಲ್ಲಿ. ಅವರಾದ್ರೂ ಏನು ಮಾಡ್ತಾರೆ.? ಭರವಸೆ ಕೊಡೋದು, ಭ್ರಷ್ಟಾಚಾರ ಮಾಡೋದು ಬಿಟ್ರೆ ಅವರಿಗೆ ಗೊತ್ತಿದ್ದದ್ದಾದ್ರೂ ಏನು? ಹಾಗಾಗಿ ಅವರನ್ನಾ ಬೈದ್ರೆ ನಮಗೇ ಪಾಪ ಬಂದ್ಬಿಡುತ್ತೆ.

ಬಂದಿದ್ದಲ್ಲಾ ಬರಲಿ, ಗೋವಿಂದನ ದಯೆ ಇರಲಿ ಅಂತಾ ಹಿಂದ ದಾಸರು ಬೇಡಿದ್ರಂತೆ. ಈಗ ನಾವು ಬೇಡಲು ಇದ್ದದ್ದು ಒಂದೇ ಬೇಡಿಕೆ. ಏನಾದ್ರೂ ಆಗ್ಲಿ. ಕ್ರೀಡಾ ಗ್ರಾಮದ ಇನ್ನೆಷ್ಟು ಮೇಲ್ಛಾವಣಿಗಳು ಬೀಳೋದಕ್ಕಿದೆಯೋ ಅದೆಲ್ಲಾ ಕಾಮನ್ವೆಲ್ತ್ ಗೇಮ್ಸ್ ಆರಂಭ ಆಗೋದ್ರೊಳಗೆ ಬಿದ್ದುಬಿಡ್ಲಿ…! ಇಲ್ಲಾಂದ್ರೆ ಪಾಪ ಸುಮ್ನೆ ಅಮಾಯಕ ಕ್ರೀಡಾಪಟುಗಳು ಮತ್ತು ಪ್ರೇಕ್ಷಕರ ಜೀವ ಹೋಗ್ಬಿಡುತ್ತೆ.

ಕಾಪಾಡಪ್ಪಾ ತಂದೆ...!

7 comments:

  1. games shuruvagodikke munchene ella biddogly anno mathideyalla ... i like it shyane. ekendre eegagle nam deshada mana marvadi ella hogbittide, hogodikke innenu ulidilla adru................,

    ReplyDelete
  2. Good bavayya... Namma deshadalli ondu COMMONWEALTH GAMES kooda sariyagi vyavasthitha reethiyalli nadeyuvudilla andre namma deshada maana maryade 3 kaasige haraajaadanthe... Nijavaglu Gamesnalli bhaagiyagiruva adhikaarigalige raajakaaranigalige naachikeya sangathi... Naanu CHINA deshada ondu Ghatane helalu ishta padutthene... 2008 alli China deshadalli Olympics nadedaddu gotthe ide... Aa Olympics udghatana divasa andare August 08ne thariku moda musukida vaathavarana ittu... Adare samaarambhakke maleyu addiyaagabaaradendu upakaranagalannu balasi Modagalannu pudi maadalagitthu... Antha China elli namma deshada Raajakaaranigalelli... Che...

    ReplyDelete
  3. Avakasha sigadiddre baree mathu mathu, sikkaga adanna nalkaru jana mechho hage namma desha madiddu kadimene, commonwealth vishayadallu agthirodu ede. yava kelasadalladru holasu rajakarana mugu thurisidre olle hesranthu barodilla. yavudadru hesaralli kanthe kanthe hanavanna jebigilisikollodakke sadhya antha eradu kannu bidkondu kayo sthithi namma deshada rajakaranigalu matthu adhikarigaladdu alva. heegadre deshakke olle hesru baralla, uddharanu agodilla alva..?

    ReplyDelete
  4. to sheenu
    ಹೌದು ಆಟ ನೆಡಿಬೇಕಾದ್ರೆ ಬಿದ್ರೆ ಎಲ್ಲರಿಗೂ ತೊಂದ್ರೆ ಅಲ್ವಾ... ಅದ್ರಕಿಂತಾ ಈಗ್ಲೆ ಬಿದ್ರೆ ಆದಷ್ಟು ಒಳ್ಳೇದು

    ReplyDelete
  5. to sandesh
    ನಿಜವಾಗ್ಲೂ ನಮ್ಮ ರಾಜಕಾರಣಿಗಳಿಗೆ ಬುದ್ಧಿ ಬರೋದಿಲ್ಲ. ಇಷ್ಟೆಲ್ಲಾ ಆದ್ರೂ ಗೇಮ್ಸ್ ಚೆನ್ನಾಗಿ ನಡೆಯುತ್ತೆ ಅಂತಾ ಸಮರ್ಥಿಸಿಕೊಳ್ತಾರೆ. 24 ನೇ ತಾರೀಕಿನ ಟೈಮ್ಸ್ ಆಫ್ ಇಂಡಿಯಾ ನೋಡು. ಅಲ್ಲಿನ ಅವ್ಯವಸ್ಥೆ ಬಗ್ಗೆ ಹೇಗೆ ಬರದ್ದ ಹೇಳಿ ಪೊಟೋಸ್ ಹಾಕಿದ್ದ.

    ReplyDelete
  6. to asha
    ರಾಜಕಾರಣಿಗಳ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಯಾಕೆಂದ್ರೆ ಮಾತನಾಡಿದವರೇ ಕೆಟ್ಟವರಾಗ್ತಾರೆ. ಅವರ ಕೈಯಲ್ಲೇ ಅಧಿಕಾರ ಇರೋವಾಗ ಜನಸಾಮಾನ್ಯರು ಏನುತಾನೇ ಮಾಡೋದಕ್ಕೆ ಸಾಧ್ಯ.... ಇವರು ದೇಶ ಉದ್ಧಾರ ಮಾಡೋದು ಬೇಡ.. ಈಗ ಇರೋ ಸ್ಥಿತಿಯಲ್ಲೇ ಇಟ್ರೆ ಸಾಕು.

    ReplyDelete
  7. Howdu bidi rajakaranane holasu, entha rajakaranigalige, avara hanavanna nambi vote hako namma janarigu buddhi ella. ellivarege namma jana hanada asegagi thamma amulya mathavanna marikoltharo allivarege entha holasu rajakaranigalu huttikolthane erthare, samaja ashte keelu mattakke elidu hogthirutthe. kashta bandaga bayige bandange mathado namma janarige vote hako munche edella gotthagodilla, gotthadru edurisi nillo dhirya eralla.

    ReplyDelete