Wednesday, September 22, 2010




ಗೆಸ್ಟ್ ಕಾಲಂ
ಅಯೋಧ್ಯಾ ತೀರ್ಪು ಮತ್ತು ಇತಿಹಾಸದ ಪುಟ  
 - ಶಿವಶಂಕರ್  ಬ್ಯಾಡಗಿ


ರಾಮ ಭಾರತದ ಸಂಸ್ಕೃತಿಯ ಪ್ರತೀಕ. ಮರ್ಯಾದಾ ಪುರುಷೋತ್ತಮ ಎಂಬ ಭಾರತೀಯರ ನಂಬಿಕೆಯ ಮಹಾಚೇತನ. ನೀತಿ ನಿಯಮ, ನೈತಿಕತೆ, ಅತ್ಯುತ್ತಮ ಆಡಳಿತಕ್ಕೆ ರಾಮ ಎಂಬ ಹೆಸರೇ ಏನೋ ಒಂದು ರೀತಿ ರೋಮಾಂಚನ. ಭಕ್ತಿ ಭಾವದ ಪರವಶತೆ. ಹೀಗೆ ಭಾರತೀಯರ ಜೀವನದ ಅವಿಭಾಜ್ಯ ಅಂಗವಾಗಿರುವ ದೇವ ಮಾನವನ ಹುಟ್ಟೂರು, ಆಗಿನ ರಾಮನ ರಾಜಧಾನಿ ಅಯೋಧ್ಯಾ ಇದೀಗ ವಿವಾದದ ಗೂಡು. ಇದಕ್ಕೆಲ್ಲಾ ಕಾರಣ 1527ರಲ್ಲಿ  ಬಾಬರ್ ಕಟ್ಟಿದ ಬಾಬ್ರಿ ಮಸೀದಿ.

ಬ್ರಿಟಿಷರ ಅವಧಿಯಲ್ಲೇ ಮೊಟ್ಟ ಮೊದಲ ಬಾರಿಗೆ ಅಂದರೆ, 1827ರಲ್ಲಿ ಬ್ರಿಟಿಷ್ ಗವರ್ನರ್ ಲಾರ್ಡ್ ವಿಲಿಯಂ ಬೆಂಟಿಂಕ್ ಬಾಬ್ರಿ ಮಸೀದಿಯನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿದ. 1857 ರವರೆಗೂ ಬಾಬ್ರಿ ಮಸೀದಿ ಹಿಂದೂ, ಮುಸ್ಲಿಂರಿಗೆ ಪವಿತ್ರವಾದ ಸ್ಥಳವಾಗಿಯೇ ಇತ್ತು. ಮಸೀದಿಯ ಅಂಗಣದಲ್ಲಿರುವ ಬಾವಿಯ ನೀರು ಎರಡೂ ಧರ್ಮಗಳ ಭಕ್ತರಿಗೂ ಪವಿತ್ರವಾಗಿತ್ತು. ಹಿಂದೂಗಳಿಗೆ ರಾಮನ ಅವತಾರದ ಸ್ಥಳವಾದ್ರೆ, ಅಲ್ಲಿನ ನೀರು ಮುಸ್ಲಿಂರಿಗೆ ಅಲ್ಲಾಹುವಿನ ಕೃಪೆ ಆಗಿತ್ತು. ಯಾವಾಗ 1857 ರಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆಯಿತೋ, ಆ ಬಳಿಕ ಅಲ್ಲಿ ಹಿಂದೂ ಮನಸ್ಸುಗಳು ಜಾಗೃತಗೊಂಡವು. 1883ರಲ್ಲಿ ಪ್ರಥಮ ಬಾರಿಗೆ ಅಲ್ಲೊಂದು ಮಂದಿರ ನಿರ್ಮಾಣ ಮಾಡಲು ಅವಕಾಶ ಕೊಡಬೇಕು ಎಂಬು ಕೂಗು ಜೋರಾಯಿತು. ಪರಿಣಾಮ ಅನುಮತಿ ಕೋರಿ ಪೈಜಾಬಾದ್ ಜಿಲ್ಲಾ ನ್ಯಾಯಾಧೀಶರಿಗೆ ಪಂಡಿತ್ ಹರಿಕೃಷ್ಣ ಎಂಬುವರು ಮನವಿ ಸಲ್ಲಿಸಿದರು. ಆದ್ರೆ ಇದಕ್ಕೆ ಬ್ರಿಟಿಷ್ ಸರ್ಕಾರ ಅನುಮತಿ ನೀಡಲಿಲ್ಲ. 1986 ರವರೆಗೆ ಹೀಗೆ ವಾದ-ವಿವಾದ ಮುಂದುವರಿಯಿತು. ಆದ್ರೆ ಹಿಂದೂಗಳ ಹೋರಾಟ ಫಲ ನೀಡಲಿಲ್ಲ. ಅಲ್ಲಿಗೆ ವಿವಾದ ತಣ್ಣಗಾಗಿತ್ತು. ಸುಮಾರು 60 ವರ್ಷಗಳು ತಣ್ಣಗಾಗಿದ್ದ ವಿವಾದ 1934 ರ ವೇಳೆಗೆ ಮತ್ತೆ ಭುಗಿಲೆದ್ದಿತು. ಪರಿಣಾಮ ಕೋಮುದ್ವೇಷ ಅಯೋಧ್ಯೆಯಲ್ಲಿ ಕಾಳ್ಗಿಚ್ಚಿನಂತೆ ಹರಡಿತ್ತು. 
ಆ ವೇಳೆ ಮಸೀದಿಗೆ ಹಾನಿಯಾಗಿತ್ತು. ಈ ಸಂದರ್ಭದಲ್ಲಿ ಗಲಭೆ ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದ ಆಂಗ್ಲರ ಆಡಳಿತ, ಮಸೀದಿಯನ್ನು ರಿಪೇರಿ  ಮಾಡಿ ವಿವಾದವನ್ನು ತಣ್ಣಗಾಗಿಸಿತ್ತು. ಹೀಗೆ ಹೊತ್ತಿಕೊಂಡ ಹಿಂದೂ ಮುಸ್ಲೀಂ ಜಟಾಪಟಿ 1949ರಲ್ಲಿ ತೀವ್ರಗೊಂಡಿತ್ತು. ಆಗ ದೇಶ ಸ್ವಾತಂತ್ರ್ಯ ಪಡೆದಿತ್ತು. ಆಗ ಹಿಂದೂ ಮನಸ್ಸುಗಳು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಾಗಿತ್ತು. ಅಲ್ಲಿ ರಾಮ ಇದ್ದ, ಅದು ರಾಮದೇಗುಲ ಎಂಬ ಕೂಗು ವ್ಯಾಪಕವಾಗುತ್ತಿತ್ತು. 1949 ಡಿಸೆಂಬರ್ ನಲ್ಲಿ ವಿವಾದ ಸ್ವರೂಪ ಪಡೆದಿತ್ತು. ಹಿಂದೂಗಳು ನಮಾಜ್ ಗೆ ಅಡ್ಡಿಪಡಿಸುತ್ತಿದ್ದಾರೆ ಎಂಬ ದೂರು ವಕ್ಫ್ ಮಂಡಳಿಗೆ ಮುಟ್ಟಿತ್ತು. ಡಿಸೆಂಬರ್ 22 ರಂದು ಅಯೋಧ್ಯಾ ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್ ಸಹ ದಾಖಲಾಗಿತ್ತು. ಇದರ ಪರಿಣಾಮ ಅಂದೇ ಮಸೀದಿಯಲ್ಲಿ ಸೀತಾರಾಮರ ಮೂರ್ತಿ ಪ್ರತಿಷ್ಟಾಪನೆಯೂ ಆಗಿ ವಿವಾದ ತಾರಕಕ್ಕೇರಿತ್ತು. 23 ರಂದು ಹಿಂದೂಗಳ ಗುಂಪು ಮಸೀದಿಯ ಕಪೌಂಡ್ ಕೆಡವಿ ಹಾಕಿತ್ತು. ಸಾವಿರಾರು ಮಂದಿ ಸೇರಿ ದೊಡ್ಡ ಆಂದೋಲನವೇ ನಡೆದುಹೋಗಿತ್ತು. ಆಗಿನ ಪ್ರಧಾನಿ ಜವಹಾರ್ ಲಾಲ್ ನೆಹರೂ, ಹಿಂದೂ ಸಂತರನ್ನು ಮಸೀದಿಯಿಂದ ಹೊರಹಾಕಿ ಮಸೀದಿಗೆ ಬೀಗ ಮುದ್ರೆ ಹಾಕಿದ್ದರು. ಅಲ್ಲಿಗೆ ತಾತ್ಕಾಲಿಕ ಶಮನವಾಗಿದ್ದ ಬಿಕ್ಕಟ್ಟು ಬೂದಿ ಮುಚ್ಚಿದ ಕೆಂಡದಂತಿತ್ತು. ಮತ್ತೆ ಇದು ಸ್ಫೋಟಗೊಂಡಿದ್ದು 1984ರಲ್ಲಿ. ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜಮಾವಣೆ ಗೊಂಡ ರಾಮ ಭಕ್ತರು ಮಸೀದಿಗೆ ಹಾಕಿದ್ದ ಬೀಗಮುದ್ರೆ ಒಡೆದು, ರಾಮನಿಗೆ ಪೂಜೆ ಸಲ್ಲಿಸಿದ್ದರು. 

 ಬಳಿಕ ರಾಜೀವ್ ಗಾಂಧಿ ವರ್ಷಕ್ಕೊಮ್ಮೆ ರಾಮನಿಗೆ ಪೂಜೆ ಸಲ್ಲಿಸಲು 1985ರಲ್ಲಿ ಅವಕಾಶ ಕಲ್ಪಿಸಿಬಿಟ್ಟರು. ಹೀಗೆ ರಾಜಕೀಯ ಸ್ವರೂಪ ಪಡೆದುಕೊಂಡ ರಾಮಜನ್ಮಭೂಮಿ ವಿವಾದ ಕೊನೆಗೆ ದೊಡ್ಡ ಗಲಭೆಗಳಿಗೆ ಕಾರಣವಾಗಿದ್ದು ತಮಗೆಲ್ಲ ಗೊತ್ತೇ ಇದೆ. ಸುಮಾರು 10 ಸಾವಿರ ಕಿ. ಮೀ. ರಥಯಾತ್ರೆ ಮಾಡಿದ ಎಲ್ ಕೆ ಅಡ್ವಾಣಿ, ಮತ್ತೊಂದೆಡೆ ರಾಮಮಂದಿರ ನಿರ್ಮಿಸಿಯೇ ಸಿದ್ಧ ಎಂದು ಪಣತೊಟ್ಟಿದ್ದ ಹಿಂದೂ ಸಂಘಟನೆಗಳಾದ ಆರ್ ಎಸ್ ಎಸ್, ವಿಶ್ವಹಿಂದೂ ಪರಿಷತ್. ಸಾಧು ಸಂತರ ನೇತೃತ್ವದಲ್ಲಿ 1992 ರ ಡಿಸೆಂಬರ್ 6 ರಂದು ಬಾಬ್ರೀ ಮಸೀದಿ ನೆಲಸಮವಾಗಿತ್ತು. ಇದ್ದಕ್ಕಿದ್ದಂತೆ ತಾತ್ಕಾಲಿಕ ರಾಮಮಂದಿರವೂ ನಿರ್ಮಾಣಗೊಂಡಿತ್ತು. ಹೀಗೆ ಸೌಹಾರ್ಧತೆಯ ಪ್ರತೀಕವಾಗಿದ್ದ ಮಸೀದಿ ಎರಡು ಧರ್ಮಗಳ ನಡುವೆ ಧ್ವೇಷಕ್ಕೆ ಕಾರಣವಾಗಿ ಬಿಟ್ಟಿತ್ತು. ಸುಮಾರು 2 ಸಾವಿರ ಅಮಾಯಕರ ಪ್ರಾಣಕ್ಕೆ ಕುತ್ತು ತಂದಿತ್ತು.

ಹೀಗೆ ಆರಂಭವಾದ ವಿವಾದ ಇದೀಗ ನ್ಯಾಯಾಲಯಗಳಿಗೂ ಕಗ್ಗಂಟಾಗಿ ಪರಿಣಮಿಸಿದೆ. 1949 ರಲ್ಲಿ ದಾಖಲಾದ ಪ್ರಕರಣಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಬಾಬ್ರೀ ಮಸೀದಿ ಜಾಗ, ವಕ್ಫ್ ಗೆ ಸೇರಬೇಕೊ ಅಥವಾ ಹಿಂದೂ ಸಂಘಟನೆಗಳಿಗೆ ಸುಪರ್ದಿಗೋ, ಇಲ್ಲವೆ ಇದು ಸರ್ಕಾರದ ಅಮೂಲ್ಯ ಆಸ್ಥಿಯೋ ಎಂಬ ಬಗ್ಗೆ ನ್ಯಾಯಾಲಯ ತೀರ್ಮಾನಿಸಬೇಕಿದೆ. ಸುಮಾರು 60 ವರ್ಷಗಳಿಂದ ವಾದ ವಿವಾದ ನಡೆದಿದೆ. ಇದೀಗ ಅಲಹಾಬಾದ್ ಹೈಕೋರ್ಟ್ ನ ಲಕ್ನೋ ಪೀಠ ಇನ್ನೇನು ನಾಳೆ ತನ್ನ ಅಂತಿಮ ತೀರ್ಪು ನೀಡಲಿದೆ.  ಹೀಗಾಗಿ ಎಲ್ಲರ ಚಿತ್ತವೀಗ ಅಲಹಾಬಾದ್ ಕೋರ್ಟ್ ನತ್ತಲೇ ನೆಟ್ಟಿದೆ. ಆ ಮಹತ್ವದ ತೀರ್ಪಿಗಾಗಿ ಕ್ಷಣಗಣನೆಯೂ ಆರಂಭವಾಗಿದೆ. ಅಷ್ಟೇ ಅಲ್ಲ ಆ ಒಂದು ಗಳಿಗೆಗಾಗಿ ದೇಶವಾಸಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. 

ಇದೀಗ ನಮ್ಮ ಮುಂದಿರುವ ನ್ಯಾಯಾಲಯದ ತೀರ್ಪು ಏನಿರಬಹುದು ಎಂಬುದರ ಬಗೆಗಿನದ್ದು. ಯಾಕೆಂದರೆ, ನ್ಯಾಯಾಲಯ ಹೊರಗೆ ವಿವಾದ ಬಗೆಹರಿಸುವ ಕೋರ್ಟ್ ನ ಪ್ರಯತ್ನ ವಿಫಲವಾಗಿದೆ. ಸೌಹಾರ್ಧಯುತ ಮಾತುಕತೆಗೆ ಎರಡೂ ಬಣಗಳು ಮುಂದಾಗದಿರುವುದು ನ್ಯಾಯಾಲಯದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.  ಹೀಗಾಗಿ ಲಕ್ನೋ ಪೀಠ ನೀಡುವ ತೀರ್ಪು ಎರಡೂ ಬಣಗಳಲ್ಲಿ ಎದೆ ಬಡಿತ ತೀವ್ರಗೊಳಿಸಿದೆ. ಎರಡು ಕಡೆ ಸರ್ವಸಮ್ಮತ ನೀರ್ಣಯ ನೀಡುವುದು ಕಷ್ಟ ಸಾಧ್ಯ. ಈ ಸಂಬಂಧ ಕೋರ್ಟ್ ಹಲವು ತನಿಖೆಗಳನ್ನು ಸುದೀರ್ಘ ವಿಚಾರಣೆ ಸಾಕ್ಷ್ಯಾಧಾರ ಎಲ್ಲವನ್ನೂ ಕಲೆ ಹಾಕಿದೆ. ಎರಡೂ ಬಣಗಳ ವಾದಗಳನ್ನು ಆಲಿಸಿಯಾಗಿದೆ. ಒಟ್ಟಾರೆ ನ್ಯಾಯಸಮ್ಮತವಾದ ತೀರ್ಪು ಹೊರಬರಬೇಕೆಂಬುದು ಸಾಮಾನ್ಯ ಜನರ ಆಶಯ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೀವ್ರ ಎಚ್ಚರಿಕೆ ವಹಿಸಿವೆ. ಎಲ್ಲೆಡೆ  ಬಿಗಿ ಭದ್ರತೆ ಕೈಗೊಂಡಿವೆ ಆದ್ರೂ, ಜನತೆಯ ಭಾವನೆಗಳನ್ನು ತಡೆಯುವುದು ಕಷ್ಟ.

5 comments:

  1. Good Shivanna... Adre 2nd paragraph 5th line alli "15857" endu bareyalagide... Adare adu "1857" endaagabekitthallave???? Haageye 3rd paragraph 10th line alli "pata" endu bareyalaagide.. Adre adu "Pana" athava "Hata" endaagabekitthallave...

    ReplyDelete
  2. to sandesh
    ತಪ್ಪು ಕಂಡು ಹಿಡಿದು, ತಿಳಿಸಿದ್ದಕ್ಕೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಈ ರೀತಿ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ.

    ReplyDelete
  3. hi don...., ella chennagide adre...,varasudarike vivada shuruvada bagge thappu mahiti nedthiddiri ansutte... yakanndre nanage gottiro prakara vivada shuruvagodu 1950ralli... gopal singh visharad anno vyakthi rama pojege avakasha madikodi endu phaijaa baaad courtge more hogu moolaka... any how don...itihasavannu mattomme nanapisisddeeri thanks....,

    ReplyDelete
  4. hi don..., neev helodella sariyide... adre madhyamagalu...ayodhye vivaditha bhumiya varasudharike 60 varshaddu endu bimbisuttiveyalla.. thirpu horabandare 60 varshada kanunu samarakke tere bilallide endu bareyutthiveyalla..... idakkenu helthiri... hagidre madhyamagalade thappu anthira

    ReplyDelete
  5. Sariyada "Kanuunu Horata" prarambha vagi 60 varsha agirabahudu...adare vivadha Prarambha vagiddu 1823 ralle...
    adakkakge bahushaha media dalli a reethi yalli bimbisuttirabahudu....

    ReplyDelete